ಬೆಂಗಳೂರು: ಸರ್ಜಾಪುರ ಮಾರತ್‌ಹಳ್ಳಿ ರಸ್ತೆಯ ವಿಪರೀತ ಟ್ರಾಫಿಕ್‌ನಲ್ಲಿ ಸಿಲುಕಿದ್ದ ವೈದ್ಯ ಡಾ. ಗೋವಿಂದ ನಂದಕುಮಾರ್ ರೋಗಿಯ ಜೀವ ಉಳಿಸುವುದುಕ್ಕಾಗಿ ತಮ್ಮ ಕಾರಿನಿಂದ ಇಳಿದು ಆಸ್ಪತ್ರೆಯವರೆಗು 3 ಕೀ.ಮಿ ಓಡಿಹೋಗಿ ಯಶ್ವಿಸಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯ ಕರುಳು ಜೀರ್ಣಾಂಗವ್ಯೂಹ ತಜ್ಞ ಡಾ.ಗೋವಿಂದ ನಂದಕುಮಾರ್ ಅವರಿಗೆ ಲಾಪ್ರೊಸ್ಕೋಪಿಕ್ ಅಂದ್ರೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಟೈಮಿಂಗ್ಸ್ ನಿಗದಿಯಾಗಿದ್ದರಿಂದ ವೈದ್ಯರು ಆಸ್ಪತ್ರೆಗೆ ಬರುವ ವೇಳೆ ಮಳೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, 3 ಕಿ.ಮೀ.ವರೆಗೂ ರಸ್ತೆ ಜಾಮ್ ಆಗಿತ್ತು. ಆದ್ದರಿಂದ ಆಸ್ಪತ್ರೆ ತಲುಪಲು ಸುಮಾರು 1ಗಂಟೆಗೂ ಹೆಚ್ಚು ಸಮಯ ಬೇಕಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆಗೆ ಹೆಚ್ಚು ಸಮಯ ಇಲ್ಲವಾದ್ದರಿಂದ ವೈದ್ಯ ಗೋವಿಂದ್ ಟ್ರಾಫಿಕ್‌ನಲ್ಲೇ ಇಳಿದು ಆಸ್ಪತ್ರೆಗೆ ಸುಮಾರು 3 ಕಿ.ಮೀ.ವರೆಗೂ ಓಡಿಕೊಂಡು ಹೋಗಿ ಯಶ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೆಚ್ಚು ವೈರಲ್ ಆಗಿದ್ದು, ವೈದ್ಯರ ಈ ಕೆಲಸಕ್ಕೆ ಸಾರ್ವಜನಿಕರು ಸೇರಿಂದಂತೆ ಹಲವು ಗಣ್ಯರು ಶ್ಲಾಘಿಸಿದ್ದಾರೆ.