Sunday, April 28, 2024

ಸತ್ಯ | ನ್ಯಾಯ |ಧರ್ಮ

ಕಂಟ್ರೋಲ್+ಬ್ಲೂಮ್ (Ctrl+Bloom)

ಒಮ್ಮೆ ಜೀನ್ಸ್ ಟೀ ಶರ್ಟ್ ಧರಿಸಿ ತೆಗೆಸಿಕೊಂಡ ಫೋಟೋಗೆ ಒಳ್ಳೆ ಬಸ್ರಿ ತರ ಹೊಟ್ಟೆ ಬಿಟ್ಕೊಂಡು ನಿಂತಿದ್ಯ.. ಅದನ್ನ dp ಗೆ ಬೇರೆ ಹಾಕಿದ್ಯ ಅಂತ ಹೀಯಾಳಿಸಿದ್ದನಂತೆ. Phone busy ಬಂದರೆ ಯಾರೊಂದಿಗೆ ಮಾತಾಡ್ತಾ ಇದ್ದಾಳೆ ಅಂತ screenshot ಕಳಿಸಬೇಕಿತ್ತಂತೆ….. ಟೆಕ್ಕಿ ಡೈರೀಸ್ ನಲ್ಲಿ ಕಾವ್ಯಶ್ರೀ

“If you hear a voice within you say you cannot paint, then by all means paint, and that voice will be silenced.”

~Vincent Van Gogh

“Hi ಹಿತಾ, ನವ್ಯ ನಿಮ್ ಜೊತೆ ಮಾತಾಡ್ತಾ ಇದಾಳ? ನಾನು ನವ್ಯ fiance ನಿಮ್ದೇನಾದ್ರು ಇವತ್ ಬರ್ತ್ ಡೇ ನಾ?  ಇಷ್ಟೊತ್ನಲ್ಲಿ ಮಾತಾಡ್ತಾ ಇದೀರಲ!”

ಹೀಗೆ ಉದ್ದದ ಮೆಸೇಜ್  Call_me_Suresh ಅನ್ನೋ ಅಕೌಂಟ್ ನಿಂದ ನನ್ನ instgram ನ inbox ಗೆ ರಾತ್ರಿ ಒಂದು ಘಂಟೆಗೆ ಬಂದಾಗ ನಿಜಕ್ಕೂ ನಾನು ಆಗ ನವ್ಯಾಳ ಜೊತೆ ಇವನ ಬಗ್ಗೆನೇ ಮಾತಾಡ್ತಾ ಇದ್ದೆ.

ನವ್ಯ, ನಾನು ಈ ಕಂಪನಿ ಸೇರಿದ ಮೊದಲ ದಿನದ New Hire Orientation ನಲ್ಲಿ ಪರಿಚಯವಾದ ಗೆಳತಿ. ಇಬ್ಬರದ್ದೂ ಬೇರೆ ಬೇರೆ ಪ್ರೊಫೈಲ್ ಆದರೂ ನಮ್ಮಿಬ್ಬರ ಸ್ನೇಹ ಈಗಲೂ ಹಾಗೆಯೇ ಇದೆ. 

ನವ್ಯ ಪ್ರೊಡಕ್ಷನ್ ಸಪೋರ್ಟ್ ನಲ್ಲಿ ಇದ್ದಾಳೆ. ನಮ್ಮೆಲ್ಲರಂತೆಯೇ ಸಣ್ಣ ಪಟ್ಟಣದಿಂದ ಬಂದ ಹುಡುಗಿ. ತಂದೆಯ ಆತ್ಮೀಯ ಸ್ನೇಹಿತರ ಮಗ ಸುರೇಶನೊಡನೆ ಮದುವೆ ಸೆಟ್ ಆಗಿದೆ. ಲಗ್ನ ಪತ್ರಿಕೆ ಕೂಡ ಹಂಚಿ ಆಗಿದೆ, ಈಗ ನವ್ಯ ತನ್ನ ಮನದಾಳದ ನೋವನ್ನ ನನ್ ಜೊತೆ ಹೊರ ಹಾಕ್ತಾ ಇದ್ಳು. 

ಸುರೇಶನ ಅಪ್ಪ ನವ್ಯಾಳ ಅಪ್ಪ ಇಬ್ಬರೂ ಒಂದೇ ಊರಿನ ಸ್ನೇಹಿತರು. ಒಟ್ಟಿಗೆ ವ್ಯವಹಾರಗಳನ್ನು ಮಾಡುತ್ತಾ ವರ್ಷಗಳಿಂದಲೂ ಜೊತೆಯಲ್ಲಿ ಇದ್ದವರು ಮತ್ತು ಇರುವವರು. ನವ್ಯಾಳನ್ನ ಅವ್ಳ ತಂದೆ ಬೇರೆಲ್ಲಿಗೂ ಓದಲು ಕಳಿಸದೆ ಆದೇ ಊರಿನಲ್ಲಿ ಇದ್ದ ಕಾಲೇಜಿನಲ್ಲಿ ಬಿಸಿಎ ಗೆ ಕಳಿಸಿದ್ದರು. ಇವಳ ಹಠ ಮತ್ತು ಇವಳ ಅಕ್ಕ ಭಾವಂದಿರ ಒತ್ತಾಯಕ್ಕೆ ಮಣಿದು ಈಗ ಬೆಂಗಳೂರಿನಲ್ಲಿ ಅವ್ಳ ಅಕ್ಕನ ಮನೇಲಿ ಇದ್ದುಕೊಂಡು ಕೆಲಸಕ್ಕೆ ಹೋಗಲು ಒಪ್ಪಿಗೆ ಕೊಟ್ಟಿದ್ದರು.

ಸುರೇಶ ಪ್ರತಿಷ್ಠಿತ ಕಾಲೇಜಿನಲ್ಲಿ  ಇಂಜಿನಿಯರಿಂಗ್ ಮುಗಿಸಿ BHEL ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವವ. Govt ಕೆಲಸ ಅಂತ ಊರಲ್ಲಿ ಇವನೇ most eligible bachelor. ನವ್ಯಾಳಿಗು ಮೊದಲು ಸುರೇಶನಿಗೆ ಒಂದು ಬಾರಿ engagement ಆಗಿ ಮದುವೆ cancel ಆಗಿದ್ದರೆ, ಎರಡು ಬಾರಿ ಮಾತುಕತೆಗಳು ಆಗಿ ಅಲ್ಲಿಗೆ ಸಂಬಂಧಗಳು ಮುರಿದು ಬಿದ್ದಿದ್ದವು.

ನವ್ಯಳ ಅಪ್ಪ ಪ್ರತಿ ಸಲ ಸಿಟಿ ಹುಡುಗಿಯರನ್ನ blame ಮಾಡ್ತಾ ಇದ್ರು, ಈ ಕೃಷ್ಣಯ್ಯ ನಿಗೆ ಎಷ್ಟ್ ಸಲ ಹೇಳ್ತೀನಿ ಇಲ್ಲೇ ಅಕ್ಕ ಪಕ್ಕದಲ್ಲಿ ಇರೋ ಮನೆಗೆ ಹೊಂದಿಕೊಳ್ಳೋ ತರದ ಹುಡುಗೀರನ್ನ ನೋಡ್ಕೋ ಅಂತ. ನನ್ ಮಾತ್ ಎಲ್ ಕೇಳ್ತಾನೆ? ಸುರೇಶನಿಗೇನೋ ಬುದ್ಧಿ ಇಲ್ಲ ಸಿಟಿ ಹುಡುಗಿ ಓದಿ, ಕೆಲ್ಸ ಮಾಡೋ ಹುಡುಗಿನೆ ಬೇಕು ಅಂತಾನೆ ಈ ಲಕ್ಷ್ಮಮ್ಮಂಗಾದ್ರು ಬುದ್ಧಿ ಬೇಡ್ವಾ.

ಹೀಗೆ ಪ್ರತಿ ಸಲ ಸುರೇಶನ ಮದುವೆ ಮಾತುಕತೆ ಮುರಿದಾಗಲೂ ಅವಳ ಅಪ್ಪ ಸುರೇಶನ ಪರವಾಗಿಯೇ ಮಾತಾಡ್ತಾ ಇದ್ದದ್ದು. 

ಅವಳು ಕನಸಲ್ಲೂ ಅಂದುಕೊಂಡಿರಲಿಲ್ಲ ಸುರೇಶನ ಜೊತೆ ತನ್ನ ಮದುವೆ ನಿಶ್ಚಯ ಆಗುತ್ತೆ ಅಂತ.

ಆದ್ರೆ ಎಂಗೇಜ್ಮೆಂಟ್ ಆಗ್ತಾನೆ ಸುರೇಶನ ಒಂದೊಂದೇ ಮುಖಗಳು ಆಚೆ ಬರೋಕೆ ಶುರು ಮಾಡಿದವು. 

ಒಮ್ಮೆ ಆಫೀಸಿನ ಯಾವುದೋ ಫೆಸ್ಟ್ ನಲ್ಲಿ ನಾನು ನವ್ಯ ಭೇಟಿ ಆಗಿ selfie ತಗೊಂಡು Instagram ನಲ್ಲಿ upload ಮಾಡಿ ನವ್ಯಾನ tag ಮಾಡಿದ್ದೆ. ಅದನ್ನ ರೆಫರೆನ್ಸ್ ಇಟ್ಕೊಂಡು insta ದಲ್ಲಿ ನನ್ನ ಫಾಲೋ ಮಾಡೋಕೆ ಶುರು ಮಾಡಿದ್ದ. ಅಂದೇ ನನ್ನ ಇಡೀ ಪ್ರೊಫೈಲ್ ಜಾಲಾಡಿ ನವ್ಯಾಳಿಗೆ ನನ್ನ ಜೊತೆ ಸೇರದಂತೆ ತಾಕೀತು ಮಾಡಿದ್ದನಂತೆ.

ನಾವಂದ್ರೆ ಏನ್ ಸುಮ್ನೇನಾ? ಬಹುಶಃ ರಾಮಾಯಣದ ಕಾಲದಲ್ಲಿ ನಾವೇನಾದರೂ ಇದ್ದಿದ್ದರೆ, ಕಲ್ಲಾಗಿದ್ದ ಅಹಲ್ಯೆಯನ್ನ ಅಗ್ನಿ ಪರ್ವತ ಮಾಡಿ ಬಿಡ್ತಾ ಇದ್ವಿ ಅಂತ ಅನ್ಸುತ್ತೆ ಅಂತ ನೇಹಾ ಆಗಾಗ ಹೇಳಿ ನಗ್ತಾ ಇರ್ತಾಳೆ.

ಇವನ creepy nature ಇಲ್ಲಿಗೆ ನಿಲ್ಲದೆ, ನೀನು ಇಂತದ್ದೇ ಬಟ್ಟೆ ಹಾಕೊಬೇಕು, ನೀನು ಹೀಗೆ ಇರ್ಬೇಕು, ನಿನ್ ಪ್ರೊಫೈಲ್ ಏನೇನೂ ಅಲ್ಲ, ಯಾವಾಗ ನಿಮ್ಮನ್ನೆಲ್ಲ lay off ಮಾಡ್ತಾರೋ ಗೊತ್ತಿಲ್ಲ, ನೀನೇನು ಲಕ್ಷ ಲಕ್ಷ ಸಂಪಾದನೆ ಮಾಡ್ತೀಯ ಹೀಗೆ ಅವಳನ್ನ ಬರೀ degrade ಮಾಡ್ತಾನೆ ಬಂದಿದ್ದನಂತೆ. ಒಮ್ಮೆ ಜೀನ್ಸ್ ಟೀ ಶರ್ಟ್ ಧರಿಸಿ ತೆಗೆಸಿಕೊಂಡ ಫೋಟೋಗೆ ಒಳ್ಳೆ ಬಸ್ರಿ ತರ ಹೊಟ್ಟೆ ಬಿಟ್ಕೊಂಡು ನಿಂತಿದ್ಯ ಅದನ್ನ dp ಗೆ ಬೇರೆ ಹಾಕಿದ್ಯ ಅಂತ ಹೀಯಾಳಿಸಿದ್ದನಂತೆ. Phone busy ಬಂದರೆ ಯಾರೊಂದಿಗೆ ಮಾತಾಡ್ತಾ ಇದ್ದಾಳೆ ಅಂತ screenshot ಕಳಿಸಬೇಕಿತ್ತು. ವಾಟ್ಸಪ್ ಆನ್ಲೈನ್ ನಲ್ಲಿ ಇದ್ದುಕೊಂಡು reply ಹತ್ತು ಸೆಕೆಂಡ್ ನ ಒಳಗೆ reply ಮಾಡಿಲ್ಲ ಅಂತ ಅಂದ್ರೆ, ಕೆಲಸದ ಮಧ್ಯೆ ಇವನಿಗೆ ಕಾಲ್ ಮಾಡಿಲ್ಲ ಅಂತ ಅಂದ್ರೆ, office call attend ಮಾಡುವಾಗ ಇವನ ಕಾಲ್ recieve ಮಾಡಿಲ್ಲ ಅಂತ ಅಂದ್ರೆ ಹೀಗೆ ಅವನು ಅವಳಿಗೆ ಪ್ರತೀ ಸಲ ಹಿಂಸೆ ಕೊಡ್ತಾ ಇದ್ದನಂತೆ. 

ವಾರದ ಹಿಂದೆ ಅವಳ Birthday ಇದ್ದಾಗ ಹನ್ನೆರೆಡು ಘಂಟೆಗೆ ಅವ್ಳ ಅಕ್ಕನ ಮನೆಗೆ ಹೋಗಿ surprise ಏನೋ ಕೊಟ್ಟ ಆದ್ರೆ ಆಕೆಗೆ ಅವಳ ಗೆಳತಿಯರು, colleagues ಕಡೆಗೆ ಅವಳ ಮಾವನ ಮಗ wish ಮಾಡೋಕೆ ಕಾಲ್ ಮಾಡಿದ್ರೆ ಈಕೆ receive ಮಾಡಿದ್ದಕ್ಕೆ ಹುಟ್ಟು ದಿನ ಅಂತಾನೂ ನೋಡದೆ ಬೈದು ಹೋಗಿದ್ದನಂತೆ. ಇವಳಿಗೆ ಇನ್ನ ಸಾಕು ಅನ್ನಿಸಿ ಅವಳ ತಂದೆಗೆ ಹೇಗೆ ಹೇಳೋದು ಅಂತ ಗೊತ್ತಾಗದೆ ನನ್ನೊಟ್ಟಿಗೆ ಮಾತಾಡಲು ಕರೆ ಮಾಡಿದ್ದಳು. ಅಲ್ಲಿಯವರೆಗೂ ಎಲ್ಲೋ ಒಂದು ಕಡೆ, he can be cured with the treatment ಅಂತ ಅನ್ನಿಸಿದ್ದ ನನಗೆ ಯಾವಾಗ ಆ ರೀತಿಯ ಮೆಸೇಜ್ ಬಂದಿತ್ತೋ ಆಗಲೇ ಹೇಳಿ ಬಿಟ್ಟೆ, ಅವ್ನ ಕಂಪನಿ details ಕೊಡು ನಾಳೆ ಸಂಜೆ ಹೊತ್ತಿಗೆ ಏನಾದ್ರೂ ಮಾಡೋಣ ಅಂತ. ಅವಳ ಅಕ್ಕ ಭಾವ ಕೂಡ ಅವಳಿಗೆ ಸಪೋರ್ಟ್ ಮಾಡುವ ಕಾರಣ ಇದೇನು ಅಂತ ದೊಡ್ಡ ವಿಷಯ ಅಂತ ಅನ್ನಿಸಲಿಲ್ಲ.

ಕೆಲ ಗಂಡಸರು ಹೀಗೆ ತಮ್ಮ ಇಗೋ satisfy ಮಾಡಿಕೊಳ್ಳೋಕೆ ಹೆಣ್ಣು ಮಕ್ಕಳನ್ನ ಹೀಗೆ worthless ಅನ್ನೋ ರೀತಿ ಫೀಲ್ ಮಾಡಿಸ್ತಾರೆ.

ನೋಡೋಣ ಅಂತ ಹೇಳಿ ಫೋನ್ disconnect ಮಾಡಿ ಮಲಗಿದ್ದೆ.

———–

Asset Products and Platforms Day ನ ತಯಾರಿಯಲ್ಲಿದ್ದೆವು ಈ ಸಲ ನಮ್ಮ ಪ್ರೊಜೆಕ್ಟ್ ನ ಪ್ರೋಡಕ್ಟ್ ಗಳನ್ನ present ಮಾಡಲು ಹೊಸ ಮುಖ‌, ಹೊಸ ದನಿ ಬೇಕಿತ್ತು ಅಂತ ಸೆಂಥಿಲ್ ಮೊದಲೇ ಹೇಳಿದ್ದರು.

ಆಕಾಂಕ್ಷ, ನೇಹಾ ಮತ್ತೆ ಸುಜಾತ ಎಲ್ಲರೂ ಈ ಸಲ ಲೀಡ್ ಪ್ರೆಸೆಂಟರ್ ಅನ್ನ decide ಮಾಡಲು resource tracker ನಲ್ಲಿ ಪ್ರೊಫೈಲ್ ಗಳನ್ನ evaluate ಮಾಡ್ತಾ ಇದ್ರು.

ಆಕಾಂಕ್ಷ ನನ್ನ ಮುಖ ನೋಡುತ್ತಾ- “ಏನು ಇವತ್ತು ಓವರ್ slept ah? Message ಕೂಡ ಮಾಡಿಲ್ಲ!”

ನಾನು – ” slept late and woke up late, ಸಂಜೆ ಎಲ್ರೂ ಮಾತಾಡೋಣ ಇದ್ರ ಬಗ್ಗೆ, ನವ್ಯ ಮತ್ತೆ ಅವ್ಳ ಅಕ್ಕ ಬರ್ತಾ ಇದಾರೆ, let’s talk about that during our break, let me look into the list, Senthil and I have some names in our mind”

ಹಾಗೆ resource tracker ಅನ್ನ ನೋಡ್ತಾ ಇದ್ದ ಹಾಗೆ ಕಣ್ಣಿಗೆ ಬಿದ್ದ ಹೆಸರು ರಿಯಾಳದ್ದು. 

ರಿಯಾ ನಮ್ಮ ತಂಡದ ಆಲ್ರೌಂಡರ್ ಅಂತ ಹೇಳಿದ್ರೆ exaggeration ಅಲ್ಲ. Software Developer ಆಗಿದ್ದು ಆಕೆಯ due diligence extraordinary. She delivers High Quality work and always on time. ಇಷ್ಟೆಲ್ಲಾ exceptional performance ಕೊಟ್ಟಿದ್ದರು ಅವಳಿಗೆ ಸಿಗಬೇಕಾದ recognition ಇನ್ನೂ ಸಿಕ್ಕಿರಲಿಲ್ಲ, I thought this is the right time ಅಂತ. 

“ರಿಯಾನ, she is extremely talented ಆದ್ರೆ ಅವ್ಳು ಮಾತೆ ಆಡಲ್ಲ, ನೋಡೋಣ ಒಂದ್ try ಮಾಡು back up ಆಗಿ ನಾವು ಇನ್ನೊಬ್ರನ್ನ shortlist ಮಾಡಿರ್ತಿವಿ.” ಎಂದಿದ್ದಳು ಸುನೈನಾ.

ರಿಯಾಳ ಬೇ ಗೆ ಹೋದ ತಕ್ಷಣ ರಿಯಾ ಬೆಚ್ಚಿ ಬಿದ್ದು ನನ್ನ ಕಡೆ ನೋಡಿದ್ದಳು, 

“Hey Riya, how are doing?”

ರಿಯಾ – “am fine ಹಿತಾ, ಏನಾದ್ರೂ problem ಆಗಿದ್ಯಾ? Any escalations or any lag?”

ನಾನು – “Hey , ಹಾಗೇನಿಲ್ಲ, ಯಾಕೆ ಆ ತರ ಅಂದುಕೋತ ಇದ್ಯಾ?”

ರಿಯಾ – “ಏನಿಲ್ಲ ಹಿತಾ I was just worried if my work wasn’t right”

ನಾನು – “you are a perfectionist why do you think like that?” Riya, I want you to present on our Assets and products on this Assets and Products day. Please be prepared, I know you do it very well.”

ರಿಯಾ – ” ಹಿತಾ I don’t think am good enough to do that. ನಾನು ಅಷ್ಟು ಪರ್ಫೆಕ್ಟ್ ಅಲ್ಲ also am not at all talented, please ಬೇರೆ ಯಾರಾದ್ರೂ deserved ಇರೋರಿಗೆ ಈ opportunity ಕೊಡಿ. Am afraid I might get caught.”

ನಾನು – “ರಿಯಾ that’s not true, ನಮ್ ಕಂಪನಿಯಲ್ಲಿ ಇರೋ one of the most talented employee ನೀನು c’mon I don’t want your talent go unnoticed.”

ಇದು ರಿಯಾ ಒಬ್ಬಳ problem ಅಲ್ಲ, work life balance, gender bias ಇವುಗಳ ನಂತರ ಐಟಿ ಹೆಣ್ಣು ಮಕ್ಕಳು ಅತಿಯಾಗಿ ಫೇಸ್ ಮಾಡೋ ತೊಂದರೆ ಅಂದ್ರೆ ಈ imposter syndrome,

ಇದೊಂದು psychological phenomenon, imposter syndrome ನಿಂದ ಬಳಲುತ್ತಾ ಇರೋವ್ರು ಯಾವಾಗ್ಲೂ ತಮ್ಮ ಸಾಮರ್ಥ್ಯವನ್ನು ಅನುಮಾನದಿಂದಲೇ ನೋಡ್ತಾ ಇರ್ತಾರೆ. ಅವರು ತಮ್ಮ ಈ ಯಶಸ್ಸು ಮತ್ತು ಅಭಿನಂದನೆಗಳಿಗೆ ಅರ್ಹರಲ್ಲ ಎಂದು ಭಾವಿಸುತ್ತಾರೆ. ಅವರ್ಯಾವತ್ತೂ ತಾವು ಮುಂದೆ ಸಿಕ್ಕಾಕೊಳ್ತಿವಿ ಎಲ್ರೂ ಮುಂದೆ humileate ಆಗ್ತಿವಿ ಅನ್ನೋ ಭಯದಲ್ಲೇ ಇರ್ತಾರೆ.

ಈ imposter syndrome ಅನ್ನೊದು ತುಂಬಾ ಜನ ಸಾಧಕರನ್ನು ಸಹ ಬಾಧಿಸಿದೆ particular ಆಗಿ women and minorities are the one who suffered the most from this imposter syndrome.

ಪ್ರಖ್ಯಾತ ಮನಶಾಸ್ತ್ರಜ್ಞೆ ವ್ಯಾಲೇರೀ ಯಂಗ್ ಹೀಗೆ ಹೇಳ್ತಾರೆ, 

“The fear of being ‘found out’ is not just an individual pathology; it’s a cultural phenomenon”.

ಈ ಭಯ ಮಾಯ ಏಂಜೆಲೋ ಅವರನ್ನು ಬಿಟ್ಟಿರಲಿಲ್ಲ ಅವರು ತಮ್ಮ

“I Know Why the Caged Bird Sings” ನಲ್ಲಿ ಹೀಗೆ ಬರ್ಕೊಂಡ್ ಇದಾರೆ :

“I have written eleven books, but each time I think, ‘uh oh, they’re going to find out now. I’ve run a game on everybody, and they’re going to find me out.’

ನಾನು – ” ನೋಡು ರಿಯಾ you are not the only one who is facing this. You have to come out of it.”

“You need to start believing in yourself Riya, You’re here for a reason, I will wait for a positive response from you, you developed the product and only you can demonstrate that better than anyone else.”

ಹೀಗೆ ಹೇಳಿ ಹೊರಬಿದ್ದೆ.

————

ಸಂಜೆ ನಾನು, ಧ್ವನಿ, ನೇಹಾ, ಆಕಾಂಕ್ಷ ಎಲ್ಲರೂ ನವ್ಯಳ ಅಕ್ಕನ ಮನೇಲಿ ಸೇರಿದ್ದೆವು. ಸುರೇಶ ನಂಗೆ ಕಳಿಸಿದ್ದ ಮೆಸೇಜ್ ನೋಡ್ತಾನೆ ನೇಹಾ ಕುದ್ದು ಹೋಗಿದ್ದಳು.

ನೇಹಾ – “ಥೂ ಇವ್ರ ಬುದ್ಧಿ ಗಳಿಗೆ ಇವ್ರು ಇನ್ನ ಹತ್ತು ಜನ್ಮ ಕೊಟ್ಟರೂ ಬದಲಾಗಲ್ಲ ಹಿತಾ.

ಅಲ್ಲ ಯಾರೂ ಮಾಡದ ಕೆಲಸ ಇವ್ನು ಮಾಡ್ತಾ ಇದಾನ ಅಥವಾ BTech ಮಾಡಿ BCA ಮಾಡಿರೊಳನ್ನ ಮದುವೆ ಆಗೋದು ಏನೋ ದೊಡ್ಡು ತ್ಯಾಗ ಅನ್ನೋ ತರ ಆಡ್ತಾನೆ.

ಹಿತಾ ನಿಂಗೆ ನೆನಪಿದೆಯಾ? ಹೋದ ವರ್ಷ ನಮ್ ಅಪ್ಪನ ಫ್ರೆಂಡ್ ಮಗ, unmarried ಆಗಿದ್ದು ನನ್ನ ಮದುವೆ ಆಗ್ತೀನಿ ಅಂತ ಬಂದಿದ್ದ? ನನ್ನೇ ಯಾಕೆ ಮದುವೆ ಆಗ್ಬೇಕು ಅಂತ ಇದ್ಯಾ ಅಂತ ಕೇಳಿದ್ರೆ, society ಗೆ pay back ಮಾಡೋಣ ಅಂತ ಇದೀನಿ, single parent ಒಬ್ಳನ್ನ ಮದುವೆ ಆಗಿ ಅವ್ಳ ಮಕ್ಕಳ ಬದುಕನ್ನ ಕಟ್ಟಿ ಕೊಡೋಣ ಅಂತ ಆಸೆ ಅಂತ ಹೇಳಿ ನನ್ ಹತ್ರ ಉಗಿಸ್ಕೊಂಡ್ ಇದ್ದ?

ನೀನು almost engage ಆಗ್ತಾ ಇದ್ದೆ ಅಲ್ವಾ.. ಹರೀಶ್ ಅವನು ಈ ಸುರೇಶ ಇವ್ರೆಲ್ಲಾ ಒಂದೇ category ಗೆ ಸೇರಿದವರು.

ತಮ್ಮ ego satisfaction ಗೆ ಯಾವ ಮಟ್ಟಕ್ಕಾದ್ರು ಇಳಿಯೋಕೆ ಹೇಸಲ್ಲ.”

ಹೌದಲ್ವಾ, ಹರೀಶನು ಹೀಗೆ ಮಾಡ್ತಾ ಇದ್ದ, ಏನೋ ಅಪ್ಪಾಜಿ ಫ್ರೆಂಡ್ ಮಗ ಅಂತ ಒಂದು ತಿಂಗಳು ತಡೆದಿದ್ದೆ. 

ಇವರೆಲ್ಲ ಏನು ಅಂತ ಅಂದ್ರೆ ಇವರನ್ನ  ತಮ್ಮ ಮನೆಗಳಲ್ಲಿ ತಮ್ಮ close ಫ್ಯಾಮಿಲಿ circle ಗಳಲ್ಲಿ ಅತಿಯಾಗಿ ಹೊತ್ತು ಮೆರೆಸಿರ್ತಾರೆ, ಚೆನ್ನಾಗಿ ಓದಿದಾನೆ ಅಂತಾನೋ, ಒಳ್ಳೆ ಕಡೆ ಕೆಲ್ಸ ಸಿಕ್ಕಿದೆ ಅಂತಾನೋ ಹೀಗೆ… 

ಸಿಟಿ ಅನ್ನೋ ಸಾಗರಕ್ಕೆ ಬಂದಾಗ ಇವರೆಲ್ಲ ಮೀನುಗಳು ಅಷ್ಟೇ, ಇವರಿಗೆ ದಿನಂಪ್ರತಿ office ನಲ್ಲಿ un noticed ಆಗಿ ಉಳಿದು ಅದ್ರಲ್ಲೂ ಇವ್ರು ಏನಾದ್ರೂ female manager ಗಳಿಗೆ ರಿಪೋರ್ಟ್ ಮಾಡ್ತಾ ಇದ್ದರಂತೂ ಇನ್ನೂ ಮುಗೀತು, end of the day, ಇವರ frustration ಹಾಗೆ male chauvinistic ego ಅನ್ನ satisfy ಮಾಡಿ ಕೊಳ್ಳಲು ಒಂದು punching bag ಬೇಕಿರುತ್ತೆ. ಆಗಲೇ, ಡೈವೋರ್ಸ್ ಆದ ಹೆಣ್ಣು ಮಕ್ಕಳು, ಏಕ ಪೋಷಕಿಯರು, ವಿಧವೆಯರು, ತಮಗಿಂತ ಕಡಿಮೆ ಓದಿರುವವರು ಸಿಗೋದು. ಇನ್ನೂ ಕೆಲವು ಸಲ ಅಪ್ಪನ ಫ್ರೆಂಡ್ ಮಕ್ಕಳು, ಅಪ್ಪನ ಬಿಸಿನೆಸ್ ಪಾರ್ಟ್ನರ್ ಮಕ್ಕಳು ಸಿಗ್ತಾರೆ ಯಾಕೆ ಅಂದ್ರೆ ಆಗ ಅಪ್ಪನ ದಾಕ್ಷಿಣ್ಯಕ್ಕೋ, ಅಪ್ಪನ ಗೆಳೆತನದ ಮುಖ ನೋಡಿಯೋ ಆ ಹೆಣ್ಣು ಮಕ್ಕಳು ಸಹಿಸಿಕೊಂಡು ಹೋಗ್ತಾರೆ ಅನ್ನೋ ಧೋರಣೆ.

ಆದ್ರೆ ಬಹಳ ಸಲ ಇವರ ಟಾರ್ಗೆಟ್ ಏಕ ಪೋಷಕಿಯರೆ.

ಇವರಿಗೆ, ಈ divorcee, widow ಹಾಗೆ single parent ಗಳು easy catch ನಂತೆ, good looking, well educated, well earning ಜೊತೆಗೆ well settled family ಇದ್ದು ಅದೊಂದು ಅವ್ರ major draw back ಇರುತ್ತೇ (ಅವ್ರ ಪ್ರಕಾರ) ಹಾಗಾಗಿ ಅವರೇನೋ ಈ ಹೆಣ್ಣು ಮಕ್ಕಳಿಗೆ ಬಾಳು ಕೊಟ್ಟ ಪರಮೇಶ್ವರರು ಅನ್ನೋ ಫೀಲಿಂಗ್ ನಲ್ಲಿ ಆ ಹುಡುಗರು ಕುಣಿಸಿದಂತೆ ಕುಣಿತಾರೆ ಅನ್ನೋ ಲೆಕ್ಕಾಚಾರದ ಜನಗಳು. ಹಾಗಂತ ಏಕ ಪೋಷಕಿಯರನ್ನ ಇಷ್ಟ ಪಟ್ಟವರೆಲ್ಲ  ಇದೆ ಉದ್ದೇಶದಿಂದ ಬರ್ತಾರೆ ಅನ್ನೋ judgement ಕೊಡ್ತಾ ಇಲ್ಲ ಆದ್ರೆ ಇಂತಹ narcissist ಗಳು ತುಂಬಾ ಇರ್ತಾರೆ ಅನ್ನೋದಂತು ತೆಗೆದು ಹಾಕುವ ಮಾತಲ್ಲ.

ಈ ಸುರೇಶನು ಆದೆ ಕೆಟಗರಿಗೆ ಸೇರಿದವನು.

Bell Hooks ಹೇಳುವಂತೆ

“Cultures of domination attack self-esteem, replacing it with a notion that we derive our sense of being from dominion over another. Patriarchal masculinity teaches men that their sense of self and identity, their reason for being, resides in their capacity to dominate others.”

ಆಕಾಂಕ್ಷಾ – “ಬೆಳಿಗ್ಗೆ imposter syndrome ಬಗ್ಗೆ ರಿಯಾಗೆ ಲೆಕ್ಚರ್ ಕೊಡ್ತಾ ಇದ್ದೆ ಅಲ್ವಾ ಹಿತಾ, ನಮ್ಮಲ್ಲಿ ಆ ರೀತಿಯ ಒಂದು ಭಾವನೆ ಬರೋಕೆ ಇಂತಹ narcissist ಗಳ years together of oppression ಏ ಕಾರಣ ಅನ್ನೋದು ಒಪ್ಕೊತಿಯ?”

ನಾನು – ” ಇಲ್ಲ ಅಂತ ಹೇಳೋಕೆ ಆಗುತ್ತಾ, ಮೊದಲಿಗೆ ನವ್ಯಳ ತಂದೆ ಗೆ ಈ ವಿಷಯ ಅರ್ಥ ಮಾಡಿಸಬೇಕು. ಅದು ಮಾಡುವ ಮೊದಲು”

ನವ್ಯಳ ಭಾವ ಅದಾಗಲೇ ನವ್ಯಳ ತಂದೆಗೆ brief ಆಗಿ ವಿವರಿಸಿದ್ದರು, ಏ ಮೊಬೈಲ್ ನಲ್ಲಿ ಗಂಟೆ ಗಟ್ಲೆ ಮಾತಾಡೋದುನ್ನ ಬಿಟ್ರೆ ಈ ಜಗಳಗಳು ನಿಲ್ತಾವೆ ನಮ್ ಕಾಲದಲ್ಲಿ ಮಾತುಕತೆ ಆಡ್ಕೊಂಡು ಹೋದಮೇಲೆ ಮತ್ತೆ ಗಂಡು ಹೆಣ್ಣು ಒಬ್ಬರಿಗೊಬ್ಬರು ಮುಖ ನೋಡ್ಕೋತ ಇದ್ದಿದ್ದು ಪರದೆ ಸರಿಸಿದ ಮೇಲೇನೆ. ನೀವೇನ್ ಈ ಮಕ್ಕಳ ಮಾತಿಗೆ ಬೆಲೆ ಕೊಟ್ಕೊಂಡು ಅಂತ ಹೇಳಿ ಸುಮ್ಮನೆ ಇರಿಸಿದ್ದರಂತೆ.

ನವ್ಯಾಳ ಅಕ್ಕ ಅದಾಗಲೇ ಸುರೇಶನ ಜೊತೆ ಮದುವೆ ಮುರಿದು ಕೊಂಡಿದ್ದ ಆ ಮೂರೂ  ಹುಡುಗಿಯರನ್ನ  ಮಾತಾಡಿಸಿದ್ದರು. ಎಲ್ಲರದ್ದೂ ಒಂದೇ ಮಾತು, “he is a psycho ಅವ್ನು ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ” 

ಇದನ್ನೆಲ್ಲ ರೆಕಾರ್ಡ್ ಮಾಡಿ ಅವಳ ಅಮ್ಮನಿಗೆ ಕಳಿಸಿದ್ದಳು. 

ಸ್ವಲ್ಪ ಸಮಯದ ನಂತರ ಸುರೇಶನ ತಂದೆ ನವ್ಯಾಳಿಗೆ ಕರೆ ಮಾಡಿ ಮದುವೆ ಮುರಿದುಕೊಳ್ಳದಂತೆ ಬೇಡಿಕೊಳ್ತ ಇದ್ದರು. “ನಮ್ಮವನನ್ನ ನಾವು ಹೇಗಾದ್ರೂ ಸರಿ ಮಾಡ್ತೀವಿ, ಇನ್ವಿಟೇಶನ್ ಎಲ್ಲ ಹಂಚಾಗಿದೆ ದಯವಿಟ್ಟು ಹೀಗೆ ಮಾಡಬೇಡಮ್ಮ ನಾನು ಎತ್ತಿ ಆಡಿಸಿದ್ದ ಮಗು ನೀನು” ಅಂತೆಲ್ಲ. ನವ್ಯ ಒಂದೇ ಉತ್ತರ ಕೊಟ್ಟಳು “ನೀವು ಎತ್ತಿ ಆಡಿಸಿದ್ದ ಮಗಳ ಬದುಕು ಚೆನ್ನಾಗಿ ಇರಲಿ ಅಂತ ಹಾರೈಸಿ ಈ ಮದುವೆ ವಿಷಯ ಇಲ್ಲಿಗೆ ಬಿಟ್ಟುಬಿಡಿ ಅಂಕಲ್” ಅಂತ

ಆಗಲೇ WhatsApp ಗೆ ರಿಯಾ ಮೆಸೇಜ್ ಮಾಡಿದ್ದಳು, “I will lead the presenters team on this Assets, Products and Platforms Day Hitha, thank you for everything “.

“The greatest challenge for most of us is believing that we are worthy now, right this minute. Worthiness doesn’t have prerequisites.”

Brene Brown

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

ಇದನ್ನು ಓದಿದ್ದೀರಾhttps://peepalmedia.com/love-lost-and-found/ http://ಲವ್ – ಲಾಸ್ಟ್ ಆಂಡ್ ಫೌಂಡ್

Related Articles

ಇತ್ತೀಚಿನ ಸುದ್ದಿಗಳು