Home ಬೆಂಗಳೂರು ದರ್ಶನ್ ಪತ್ನಿ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ – ಇಬ್ಬರು ಅರೆಸ್ಟ್

ದರ್ಶನ್ ಪತ್ನಿ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ – ಇಬ್ಬರು ಅರೆಸ್ಟ್

ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್(45), ನಿತಿನ್(31) ಬಂಧಿತ ಆರೋಪಿಗಳು.

ಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಓರ್ವ ಆಟೋ ಚಾಲಕ ಮತ್ತು ಮತ್ತೋರ್ವ ಸಾಫ್ಟ್​ವೇರ್ ಇಂಜಿನಿಯರ್. ಚಿಕ್ಕಬಾಣಾವರದ ನಿವಾಸಿ ಚಂದ್ರಶೇಖರ್ ಆಟೋ ಡ್ರೈವರ್ ಆಗಿದ್ದರೆ, ದಾವಣಗೆರೆ ಮೂಲದ ನಿತಿನ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಇಬ್ಬರು ಆರೋಪಿಗಳು ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್​​ನಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಅಶ್ಲೀಲ ಮೆಸೇಜ್ ಹಾಗೂ ಪೋಸ್ಟ್ ವಿರುದ್ಧ ದರ್ಶನ್ ಪತ್ನಿ ಇತ್ತೀಚೆಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ದೂರು ನೀಡಿ ದಿನಗಳು ಉರುಳಿದ್ದರೂ, ಪೊಲೀಸರು ಕ್ರಮ ತೆಗೆದುಕೊಳ್ತಿಲ್ಲ ಎಂದು ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಪ್ರಕರಣದ ತನಿಖೆಯನ್ನು ತುರ್ತಾಗಿ ನಡೆಸುವಂತೆ, ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದ್ದರು.

You cannot copy content of this page

Exit mobile version