ಹಾಸನ : ನಗರದ ಡಿಸಿ ಕಛೇರಿ ಆವರಣದಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್ತೇರ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್ ವಿತರಣೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೆರವೇರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹೆಚ್.ಕೆ.ಡಬ್ಲೂ ಸಂಸ್ಥೆವತಿಯಿಂದ ಮಂಜುನಾಥ್ ಅವರು ನಮ್ಮ ಸರಕಾರಿ ಶಾಲೆಯಲ್ಲಿ ಓದುವಂತಹ ಹೆಣ್ಣು ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದಾರೆ. ಸರಕಾರಿ ಶಾಲೆಯಲ್ಲಿ ಓದುತ್ತಿರುವ ಸುಮಾರು ಹತ್ತು ಹೆಣ್ಣು ಮಕ್ಕಳಿಗೆ ಸೈಕಲ್ ಕೊಡುತ್ತಿದ್ದು, ಜೊತೆಗೆ ಶಾಲಾ ಬ್ಯಾಗ್, ಹತ್ತು ನೋಟ್ ಪುಸ್ತಕ ನೀಡಿದ್ದಾರೆ. ಈ ಕೆಲಸ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ತಿಳಿಯಬೇಕು. ಇವರ ಸಣ್ಣ ಪ್ರಯತ್ನದಲ್ಲಿ ಶಾಲಾ ಮಕ್ಕಳು ಸದುಪಯೋಗ ಪಡೆದುಕೊಂಡು ಲಾಭ ಪಡೆದು ಮತ್ತೆ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಈ ಮೂಲಕ ಸರಕಾರಿ ಶಾಲೆಗಳು ಉಳಿಯಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಹಂಜಳಿಗೆ ಮಂಜುನಾಥ್ ಕಾಳಿಂಗಪ್ಪ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ನಡೆ ಸರಕಾರಿ ಶಾಲೆ ಕಡೆಗೆ ಅಧ್ಯಾಯನದಲ್ಲಿ ಸರಕಾರಿ ಶಾಲೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಈ ವರ್ಷ ಹಾಸನ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಓದುತ್ತಿರುವ ಸರಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಹತ್ತು ಸೈಕಲನ್ನು ನೀಡಲಾಗಿದೆ. ನಮ್ಮ ಜೊತೆ ನನ್ನ ಸ್ನೇಹಿತೆ ಸಂದ್ಯಾ ಮತ್ತು ಅರ್ಪಣ ಕೂಡ ಕೈಜೋಡಿಸುತ್ತಿದ್ದಾರೆ ಎಂದರು. ನಮ್ಮ ಉದ್ದೇಶ ಏನೆಂದರೇ ಸೈಕಲ್ ಕೊಡುವುದರಿಂದ ಶಾಲೆಯ ಹಾಜರಾತಿ ಹೆಚ್ಚಾಗುತ್ತದೆ. ಈ ಸೈಕಲ್ ಕೊಡುವ ಬಗ್ಗೆ ಮತ್ತೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈಗಾಗಲೇ ಆಲೂರು ತಾಲೂಕಿನ ಸರಕಾರಿ ಶಾಲೆಗಳಿಗೆ ನೋಟ್ ಪುಸ್ತಕ ಬ್ಯಾಗುಗಳನ್ನು ಕೊಡುತ್ತಾ ಬರುತ್ತಿದ್ದು, ಮುಂದೆಯೂ ಕೂಡ ಇದನ್ನ ಮುಂದುವರೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದೆ ವೇಳೆ ಹಂಜಳಿಗೆ ಕಾಳಿಂಗಪ್ಪ ವೆಲ್ತೇರ್ ಅಸೋಸಿಯೇಷನ್ ಸಂಸ್ಥೆ ನಿರ್ದೇಶಕರಾದ ಹಲಸೂರು ಕಾಂತರಾಜು, ದಾಸೇಗೌಡ ಇತರರು ಉಪಸ್ಥಿತರಿದ್ದರು.