Home ಬ್ರೇಕಿಂಗ್ ಸುದ್ದಿ ಹಾಸನ ಬಾಬು ಜಗಜೀವನ್ ರಾವ್ ಜಯಂತಿ ಆಕರ್ಷಕ ಮೆರವಣಿಗೆಗೆ ಡಿಸಿ ಚಾಲನೆ

ಬಾಬು ಜಗಜೀವನ್ ರಾವ್ ಜಯಂತಿ ಆಕರ್ಷಕ ಮೆರವಣಿಗೆಗೆ ಡಿಸಿ ಚಾಲನೆ

ಹಾಸನ : ಬಾಬು ಜಗಜೀವನ್ ರಾವ್ ಅವರ ೧೧೮ನೇ ಜಯಂತಿ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬೆಳ್ಳಿ ಸಾರೋಟದಲ್ಲಿ ಇಡಲಾಗಿದ್ದ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಹಾಗೂ ಜಿಪಂ ಸಿಇಓ ಬಿ.ಆರ್. ಪೂರ್ಣಿಮಾ ಇತರರು ಪುಷ್ಫಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ನಗರದ ಡಿಸಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಬು ಜಗಜೀವನ್ ರಾವ್ ಅವರ ಜಯಂತಿಯ ಆಕರ್ಷಕ ಮೆರವಣಿಗೆ ಸಾಂಸ್ಕೃತಿಕ ಕಲಾ ತಂಡದೊಡನೆ ಮುಖ್ಯ ರಸ್ತೆಯಲ್ಲಿ ಸಾಗಿತು.

 ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರ ಕಂಡಂತಹ ಮಹಾನ್ ಚೇತನ. ರಾಷ್ಟ್ರದ ಉಪ ಪ್ರಧಾನಿಯಾಗಿ ತಮ್ಮದೆಯಾದಂತಹ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಹೋಗಲಾಡಿಸಲು ಮುಂದಾದರು. ಬಡವರ ಕೂಲಿ ಕಾರ್ಮಿಕರ ಪರವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದರು. ಬಾಬು ಜಗಜೀವನ್ ರಾವ್ ಅವರ ೧೧೮ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದು ಇದೆ ವೇಳೆ ಎಲ್ಲಾರಿಗೂ ಶುಭಾಶಯವನ್ನು ಕೋರಿದರು.

 ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಮತ್ತು ಭಾರತವನ್ನು ಮುನ್ನೆಡೆಗೆ ತರುವಲ್ಲಿ ಅವರ ಪಾತ್ರ ಹೆಚ್ಚಿದೆ. ದೀನ ದಲಿತರಿಗೆ ಹಾಗೂ ಎಲ್ಲಾರಿಗೂ ಕೂಡ ಭಾರತದ ಸಮಗ್ರ ಪ್ರಜೆಗಳಿಗೊಸ್ಕರ ಕೆಲಸ ಮಾಡಿದ್ದಾರೆ ಎಂದರು. ಅವರ ಅಶೋತ್ತರಗಳನ್ನ ಈಡೇರಿಸುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ. ಈ ರೀತಿ ಅವರ ಆಶಯವನ್ನು ಈಡೇರಿಸುವಂತೆ ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ಮುಖಂಡರಾದ ಹೆಚ್.ಪಿ. ಶಂಕರರಾಜು, ಟಿ.ಆರ್. ವಿಜಯಕುಮಾರ್, ಗಂಗಾಧರ್, ಜಗದೀಶ್ ಚೌಡಳ್ಳಿ, ಚಿನ್ನಸ್ವಾಮಿ, ಎಸ್.ಡಿ. ಚಂದ್ರು, ರಾಜೇಶ್, ಪ್ರಕಾಶ್, ಹರೀಶ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version