Home ಬ್ರೇಕಿಂಗ್ ಸುದ್ದಿ ಹಾಸನ ಅಮೃತ ಬೀಜ ಕೃತಿ ಬಿಡುಗಡೆ ಶಿವಾನಂದ ತಗಡೂರು ಅನೇಕ ಉತ್ತಮ ಕೆಲಸ ಮಾಡುತ್ತಿದ್ದಾರೆ – ಆರ್.ಪಿ....

ಅಮೃತ ಬೀಜ ಕೃತಿ ಬಿಡುಗಡೆ ಶಿವಾನಂದ ತಗಡೂರು ಅನೇಕ ಉತ್ತಮ ಕೆಲಸ ಮಾಡುತ್ತಿದ್ದಾರೆ – ಆರ್.ಪಿ. ವೆಂಕಟೇಶ್ ಮೂರ್ತಿ

ಹಳೆಯ ನೆನಪನ್ನು ಮೆಲುಕು ಹಾಕಿದ ಹಿರಿಯ ಪತ್ರಕರ್ತರು

ಹಾಸನ: ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕೆ.ಯು.ಡ.ಬ್ಲ್ಯೂ.ಜೆ. ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರ ರಚಿತ ಮಾಧ್ಯಮ ಲೋಕದ ಅಮೃತ ಬೀಜ ಕೃತಿ ಬಿಡುಗಡೆ ಹಾಗೂ ಹಿರಿಯ ಪತ್ರಕರ್ತರಿಗೆ ಕೃತಿಯ ಸಮರ್ಪಣೆ ಸನ್ಮಾನ ಸಮಾರಂಭ ಕಾರ್ಯಕ್ರಮ ಶನಿವಾರದಂದು ಬೆಳಿಗ್ಗೆ ಅರ್ಥಪೂರ್ಣವಾಗಿ ಯಶಸ್ವಿಗೊಂಡಿತು.

 ಇದೆ ವೇಳೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸ್ವಾತಂತ್ರ್ಯದ ವೇಳೆ ಮನೆ ಅಂಗಳದಲ್ಲಿ ಹೆಸರಿನಲ್ಲಿ ಹಿರಿಯ ಪತ್ರಕರ್ತರ ಮನೆಗೆ ಹೋಗಿ ಸನ್ಮಾನಿಸಿ ಅವರ ಮನದಾಳದ ಮಾತುಗಳನ್ನು ಕೇಳಲಾಯಿತು. ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದಂತಹ ಹಿರಿಯ ಪತ್ರಕರ್ತರ ಅನುಭವವನ್ನು ದಾಖಲಿಸಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ರಾಜ್ಯ ಸಂಘದಿಂದ ಬೆಂಗಳೂರಿನ ಪ್ರಮುಖ ಹಿರಿಯ ಪತ್ರಕರ್ತರನ್ನು ಗುರುತಿಸಿ ಅವರ ಮನೆಗಳಿಗೆ ಭೇಟಿ ನೀಡಿ ಮನದಾಳದ ಮಾತನ್ನು ಪುಸ್ತಕದಲ್ಲಿ ಮೆಲುಕು ಹಾಕಲಾಗಿದೆ ಎಂದರು. ಹಿರಿಯ ಪತ್ರಕರ್ತರ ಭೇಟಿ ಮಾಡಿ ಅವರ ಮಾತುಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದು, ತೊಂಬತ ರ ಇಳಿವಯಸ್ಸಿನ ಪತ್ರಕರ್ತರು ತಮ್ಮ ವೃತ್ತಿಯನ್ನು ಹೇಗೆ ಆರಂಭಿಸಿದರು ಹಾಗೂ ಇಂದಿನ ಪತ್ರಿಕಾ ವೃತ್ತಿ, ಪರಿಸ್ಥಿತಿ ಹೇಗೆ ಇದೆ ಎಂಬ ಅವರ ಅಭಿಪ್ರಾಯ ಏನು ಎಂಬುದನ್ನು ಪುಸ್ತಕ ರೂಪದಲ್ಲಿ ತರಲಾಗಿದೆ ಮತು  ಅವರ ಮಾತುಗಳನ್ನು ಸಂಘದ ಯುಟ್ಯೂಬ್ ಚಾನೆಲ್ ಮೂಲಕ ಬಿತ್ತರಿಸಲಾಗಿದೆ ಎಂದು ಹೇಳಿದರು. ಸಂಘದ ಇಂತಹ ಕಾರ್ಯ ಚಟುವಟಿಕೆಗೆ ಬಹುತೇಕ ಹಿರಿಯ ಪತ್ರಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿರಿಯ ಕೆಲ ಪತ್ರಕರ್ತರ ಮಾತುಗಳನ್ನು ಯೂಟೂ ಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಹೇಳಿದರು.

 ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ಮದನಗೌಡರು ಮಾತನಾಡಿ, ಪತ್ರಕರ್ತರ ಸಂಘದ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರು ರವರು ರಾಜ್ಯದ ಹಿರಿಯ ಪತ್ರಕರ್ತರನ್ನು ಗುರುತಿಸಿ ಅವರ ಮನದಾಳದ ಮಾತುಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು ಹೆಮ್ಮೆಯ ವಿಚಾರವಾಗಿದೆ. ಇದರಿಂದ "ಅಮೃತ ಬೀಜ" ಕೃತಿ ಬಿಡುಗಡೆ, ಹಿರಿಯ ಪತ್ರಕರ್ತರಿಗೆ ಕೃತಿಯ ಸಮರ್ಪಣೆ ಆ ಕಾಲಘಟ್ಟದ ಪತ್ರಕರ್ತರು ಮಾಧ್ಯಮ ಕ್ಷೇತ್ರದಲ್ಲಿ ಅನುಭವಿಸಿದ ಕಷ್ಟ ಸುಖಗಳ ಬಗ್ಗೆ ತಿಳಿದುಕೊಂಡಂತಾಗುತ್ತದೆ ಅವರ ವೃತಿ  ಜೀವನದಲ್ಲಿ ಘಟಿಸಿದಂತಹ ನೆನಪುಗಳನ್ನು ಮೆಲಕು ಹಾಕಲು ಪುಸ್ತಕವು ನೆರವಾಗಲಿದೆ. ಶಿವಾನಂದ ಅವರ ಇಂತಹ ಅನೇಕ ಕಾರ್ಯಗಳು ಸಂಘಕ್ಕೆ ಹೊಸ ಸ್ಪೂರ್ತಿಯನ್ನು ತಂದಿದೆ ಎಂದರು. ಶಿವಾನಂದ್ ಅವರು ಸಂಘದ ಸಂಘಟನೆ ಹಾಗೂ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮುನ್ನಡೆಸುತ್ತಿರುವುದು ಶ್ಲಾಘನೀಯ ಹಾಗೂ ಸಂಘದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.ಅನೇಕ ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರು ಕೋವಿಡ್- ೧೯ ಸಂದರ್ಭದಲ್ಲಿಯೂ ಪತ್ರಕರ್ತರ ನೆರವಿಗೆ ಬಂದರು. ಹಾಸನ ಜಿಲ್ಲೆ ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪತ್ರಕರ್ತರ ಸಂಘವನ್ನು ಬಲಗೊಳಿಸುತಾ  ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹೊಸ ಹುರುಪನ್ನು ತಂದುಕೊಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತರ ಅನುಭವಗಳು ಯುವ ಪತ್ರಕರ್ತರಿಗೆ ಸ್ಪೂರ್ತಿ ಆಗಲಿ ಎಂದು ಹಾರೈಸಿದರು.

 ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಶಿವಾನಂದ ತಗಡೂರು ಅವರು ಪತ್ರಕರ್ತರ ಸಂಘಕ್ಕೆ ರಾಜ್ಯಾಧ್ಯಕ್ಷರಾದ ಮೇಲೆ ಭಾರತ ದೇಶದ ಯಾವ ರಾಜ್ಯದಲ್ಲಿ ಪತ್ರಕರ್ತರಿಗಾಗಿ ಇಷ್ಟೊಂದು ಸಂಘಟನೆ ಗಟ್ಟಿಗೊಳಿಸಲುವ ಕೆಲಸ ಮಾಡಿರುವುದಿಲ್ಲ. ಇವರ ಎರಡು ಬಾರಿ ರಾಜ್ಯಾಧ್ಯಕ್ಷರಾದರೂ ಇಲ್ಲಿವರೆಗೂ ಪತ್ರಕರ್ತರ ಸಂಘಕ್ಕೆ ಒಂದು ಕಪ್ಪು ಚುಕ್ಕಿ ಬಾರದಾಗೆ ನಡೆದುಕೊಂಡಿರುವುದಾಗಿ ಇದೆ ವೇಳೆ ಶ್ಲಾಘನೆವ್ಯಕ್ತಪಡಿಸಿದರು.

 ಹಿರಿಯ ಪತ್ರಕರ್ತರಾದ ತೋ.ಚ. ಅನಂತಸುಬ್ಬರಾಯ ಅವರು ಮಾತನಾಡಿ, ತಮ್ಮ ಪತ್ರಿಕೆ ನಡೆದು ಬಂದ ಹಾದಿ ಹಾಗೂ ಶಿವಾನಂದ ತಗಡೂರು ಅವರ ಅಮೃತ ಬೀಜ ಕೃತಿ ಬಗ್ಗೆ ಇದೆ ವೇಳೆ ಕೆಲ ಸಮಯ ವಿಶ್ಲೇಷಿಸಿದರು. ಇಂತಹ ಪುಸ್ತಕಗಳು ಹಳೆಯ ನೆನಪನ್ನು ಮರುಕಳಿಸುತ್ತದೆ ಎಂದರು.

   ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಪತ್ರಕರ್ತರ ಕ್ಷೇತ್ರದಲ್ಲಿ ಮಹಿಳೆಯರು ತುಂಬ ಕಡಿಮೆ ಇದ್ದು, ಹಿಂದಿನ ದಿನಗಳಲಂತು ಅತೀ ವಿರಳ ಆದರೇ ಪ್ರಸ್ತೂತದಲ್ಲಿ ಕೆಲವರು ಈ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಸಂತೋಷದ ವಿಚಾರ ಎಂದು ಹೇಳಿದರು. ಪುಸ್ತಕ ಬಿಡುಗಡೆ ವೇಳೆ ಈ ಸನ್ಮಾನ ಮಾಡಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.

  ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಅಮೃತ ಬೀಜ ಕೃತಿಯನ್ನು ಒಂದು ಐತಿಹಾಸಿಕವಾಗಿ ಬಿಡುಗಡೆಗೊಳಿಸಿದ್ದಾರೆ. ಶಿವಾನಂದ ತಗಡೂರು ರಾಜ್ಯಾಧ್ಯಕ್ಷರಾಗಿ ಅನೇಕ ಉತ್ತಮ ಕೆಲಸ ಮಾಡಿರುವುದಾಗಿ ಇದೆ ವೇಳೆ ನೆನಪಿಸಿದರು.

  ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಲೀಲಾವತಿ, ಆರ್.ಪಿ. ವೆಂಕಟೇಶ್ ಮೂರ್ತಿ ಹಾಗೂ ತೋ.ಚ. ಅನಂತಸುಬ್ಬರಾಯ ಇವರನ್ನು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಭಾಗವಹಿಸಿದ್ದ ಗಣ್ಯರು ಪುಸ ಕವನ್ನು ಬಿಡುಗಡೆ ಮಾಡಿದರು  

  ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್ ಸ್ವಾಗತಿಸಿ ವಂದಿಸಿದರು.

You cannot copy content of this page

Exit mobile version