ಬೇಲೂರು : ಬೇಲೂರು ಪಟ್ಟಣದ ಜೆ.ಪಿ ನಗರದ ನ್ಯಾಯಬೆಲೆ ಅಂಗಡಿ ಸೊಸೈಟಿ ಸಂಖ್ಯೆ 84ರಲ್ಲಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಮಾನವ ಹಕ್ಕು ಹೋರಾಟಗಾರರ ಒಕ್ಕೂಟ ಬೇಲೂರು ತಾಲೂಕು ಘಟಕದ ಪದಾಧಿಕಾರಿಗಳು ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಯಿತು.ಇದೇ ವೇಳೆ ಸಾರ್ವಜನಿಕರು ಪ್ರತಿ ತಿಂಗಳು ಪಡಿತರ ರೇಷನ್ ಪಡೆಯಲು 20 ರೂಪಾಯಿ ಮತ್ತು ಕೆ. ವೈ. ಸಿ (ಹೆಬ್ಬೆಟ್ಟು) ನೀಡಲು 30 ರೂಪಾಯಿ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು ಸಾರ್ವಜನಿಕರ ಆರೋಪದ ಮೇರೆಗೆ ಮಾನವ ಹಕ್ಕು ಹೋರಾಟ ಒಕ್ಕೂಟದ ಪದಾಧಿ ಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಾದ ಶ್ರೀಮತಿ ವೀಣಾ ಮತ್ತು ಗೀತಾಂಜಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಡಿತರ ರೇಷನ್ ನೀಡಲು ಯಾವುದೇ ಹಣ ಕೊಡುವಂತಿಲ್ಲ ಅಕ್ರಮವಾಗಿ ಸಾರ್ವಜನಿಕರಿಂದ ಮನಬಂದಂತೆ ಹಣ ವಸೂಲಿ ಮಾಡಿರುವುದು ತಪ್ಪು ,ಹಾಗಾಗಿ ಅಕ್ರಮವಾಗಿ ಹಣ ಪಡೆದಿರುವ ಸೊಸೈಟಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂಬಂಧ ಮಾತನಾಡಿದ ಮಾನವ ಹಕ್ಕು ಹೋರಾಟ ಒಕ್ಕೂಟದ ಹಾಸನಜಿಲ್ಲಾಧ್ಯಕ್ಷರಾದ ಎಂ ಜಿ ನಿಂಗರಾಜ್ ಬೇಲೂರಿನ ಜೆ.ಪಿ ನಗರ ಬಡಾವಣೆಯ ಸೊಸೈಟಿಯಲ್ಲಿ ಮನಬಂದಂತೆ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು ಬಡ ಜನರಿಗಾಗಿ ಸರ್ಕಾರ ನೀಡಿರುವ ಉಚಿತ ಯೋಜನೆಗೆ ಹಣ ಪಡೆಯುತ್ತಿದ್ದು ಅಕ್ಷಮ್ಯ ಅಪರಾಧ ಆದಕಾರಣ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಜೆ.ಪಿ ನಗರ ಬಡಾವಣೆಯ ಸೊಸೈಟಿ ನಿರ್ವಾಹಕಿ ಪದ್ಮಮ್ಮ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳ ಲಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಐ ಎನ್. ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಜಿ.ಎನ್.ಶಂಕರ್ ಪ್ರಸಾದ್ ಬಿ ಪಿ.ನಗರ ಪ್ರಧಾನ ಕಾರ್ಯದರ್ಶಿಯಾದ ಕಿರಣ್.ದೀಕ್ಷಿತ್ ಆರ್. ರವೀಂದ್ರನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.