ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 700 ಕ್ಕೆ ತಲುಪಿದೆ. ಘಟನೆ ಸಂದರ್ಭದಲ್ಲಿ ಆದ ಅವಘಡಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಅಲ್ಲಿನ ಜನರ ಆಕ್ರಂದನ ಆತಂಕ ಸೃಷ್ಟಿಸಿದೆ.

ಮ್ಯಾನ್ಮಾರ್ನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದುವು ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಮಧ್ಯ ಮ್ಯಾನ್ಮಾರ್ನಲ್ಲಿದೆ ಎಂದು ವರದಿಯಾಗಿದೆ.
ಮ್ಯಾನ್ಮಾರ್ನ ಎರಡನೇ ಅತಿದೊಡ್ಡ ನಗರವಾದ ಮಾಂಡಲೆ ಬಳಿ 7.7 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪದ ನಂತರ ಭೂಕಂಪನಗಳು ಸಂಭವಿಸಿದ್ದು, ಅವುಗಳಲ್ಲಿ ಒಂದು ರಿಕ್ಟರ್ ಮಾಪಕದಲ್ಲಿ 6.4 ರಷ್ಟಿತ್ತು ಎಂದು ವರದಿಯಾಗಿದೆ.
ಎರಡು ಭಾರಿ ಸಂಭವಿಸಿದ ಭೂಕಂಪಗಳಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ ಮತ್ತು100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಸಹ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ನೂರಾರು ಮೃತದೇಹಗಳು ಸಿಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಸಾವಿರಕ್ಕೂ ಹೆಚ್ಚು ಆಗುವ ಆತಂಕ ಎದುರಾಗಿದೆ.
ಭೂಕಂಪಗಳು ಜೀವಗಳನ್ನು ಬಲಿತೆಗೆದುಕೊಳ್ಳುವುದರ ಜೊತೆಗೆ, ಹಲವಾರು ಕಟ್ಟಡಗಳು, ಸೇತುವೆಗಳು ಸಹ ನೆಲ ಕಚ್ಚಿವೆ. ಪ್ರವಾಸಿಗರ ಸ್ವರ್ಗದಂತಿದ್ದ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಈಗ ಅಕ್ಷರಶಃ ನರಕ ಸದೃಶವಾಗಿ ಬದಲಾಗಿದೆ.