ದೆಹಲಿ: ರಾಜ್ಯದಲ್ಲಿ 5 ನೇ ವ್ಯಕ್ತಿಗೆ ಮಂಕಿಪಾಕ್ಸ್ ಡೃಢವಾಗಿದೆ ಎಂದು ದೆಹಲಿ ಸರ್ಕಾರ ವರದಿ ನೀಡಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಎಲ್ಎನ್ಜೆಪಿ ಆಸ್ಪತ್ರೆ ಎಂಡಿ ಡಾ ಸುರೇಶ್ ಕುಮಾರ್, ಒಬ್ಬ ರೋಗಿಯನ್ನು ನಮ್ಮ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಮತ್ತು ಆಕೆಯ ಮಾದರಿಯು ಮಂಕಿಪಾಕ್ಸ್ ಪಾಸಿಟಿವ್ ಎಂದು ದೃಢವಾಗಿದೆ. ಇಲ್ಲಿ ಇನ್ನೂ ಒಟ್ಟು 5 ಪ್ರಕರಣಗಳು ವರದಿಯಾಗಿವೆ. ಪ್ರಸ್ತುತವಾಗಿ 4 ರೋಗಿಗಳು ದಾಖಲಾಗಿದ್ದು ಒಬ್ಬರು ಬಿಡುಗಡೆಗೊಂಡಿದ್ದಾರೆ. ಸದ್ಯಕ್ಕೆ ಸೋಂಕು ದೃಢಪಟ್ಟವರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದ್ದಾರೆ.