Home ಸಿನಿಮಾ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿವಾದ: ಮೆಟಾ ಸಂಸ್ಥೆಗೆ ಪೊಲೀಸ್‌ ನೋಟಿಸ್

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿವಾದ: ಮೆಟಾ ಸಂಸ್ಥೆಗೆ ಪೊಲೀಸ್‌ ನೋಟಿಸ್

0

ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ವಿಷಯದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೀಡಿಯೊವನ್ನು ರಚಿಸಿದ ಖಾತೆಯ URL ವಿವರಗಳನ್ನು ಪಡೆದುಕೊಳ್ಳಲು ಸಾಮಾಜಿಕ ಮಾಧ್ಯಮ ದೈತ್ಯ ಮೆಟಾವನ್ನು ಸಂಪರ್ಕಿಸಿದೆ. ದೆಹಲಿ ಪೊಲೀಸರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದವರ ವಿವರಗಳನ್ನು ಹುಡುಕುತ್ತಿದ್ದಾರೆ.

“ವೀಡಿಯೊ ಮೊದಲಿಗೆ ವಿಡಿಯೋ ಪೋಸ್ಟ್‌ ಮಾಡಿದ ಖಾತೆಯ URL ಐಡಿಯ ವಿವರ ನೀಡುವಂತೆ ನಾವು ಮೆಟಾಗೆ ಪತ್ರ ಬರೆದಿದ್ದೇವೆ” ಎಂದು ತನಿಖಾಧಿಕಾರಿ ಬಹಿರಂಗಪಡಿಸಿದ್ದಾರೆ.

ದೆಹಲಿ ಪೊಲೀಸರು IPC 1860 ಸೆಕ್ಷನ್ 465 (ಫೋರ್ಜರಿ), 469 (ಮಾನನಷ್ಟ), ಸೆಕ್ಷನ್ 66C (ಗುರುತಿನ ಕಳ್ಳತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ 66E (ಗೌಪ್ಯತೆ ಉಲ್ಲಂಘನೆ), 2000ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಡಿಯೋ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

You cannot copy content of this page

Exit mobile version