Home ದೇಶ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅತಿಶಿ. ಕೇಜ್ರಿವಾಲ್ ಬಳಸುತ್ತಿದ್ದ ಕುರ್ಚಿಯ ಪಕ್ಕ ಹೊಸ ಕುರ್ಚಿಯಲ್ಲಿ ಕುಳಿತು...

ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅತಿಶಿ. ಕೇಜ್ರಿವಾಲ್ ಬಳಸುತ್ತಿದ್ದ ಕುರ್ಚಿಯ ಪಕ್ಕ ಹೊಸ ಕುರ್ಚಿಯಲ್ಲಿ ಕುಳಿತು ಸಹಿ

0

ಆಮ್‌ ಆದ್ಮಿ ಪಕ್ಷದ ನಾಯಕಿ ಅತಿಶಿಯವರು ಇಂದು ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸೋಮವಾರ ಬೆಳಗ್ಗೆ ದೆಹಲಿ ಸಚಿವಾಲಯದಲ್ಲಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಕುಳಿತಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳದೆ ಬೇರೆ ಕುರ್ಚಿಯಲ್ಲಿ ಕುಳಿತು ಅಧಿಕಾರ ವಹಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಹಲವು ಎಎಪಿ ಮುಖಂಡರು ಭಾಗವಹಿಸಿದ್ದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅತಿಶಿ ಕೇವಲ 5 ತಿಂಗಳು ಮಾತ್ರ ದೆಹಲಿ ಸಿಎಂ ಆಗಲಿದ್ದಾರೆ.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅವರ ಜೊತೆಗೆ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್, ಮುಖೇಶ್ ಮತ್ತು ಅಹ್ಲಾವತ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅತಿಶಿ ದೆಹಲಿಯ ಎಂಟನೇ ಮುಖ್ಯಮಂತ್ರಿ ಮತ್ತು ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಲ್ಲದೆ, ದೆಹಲಿ ಮುಖ್ಯಮಂತ್ರಿ ಕುರ್ಚಿಯನ್ನು ತನ್ನದಾಗಿಸಿಕೊಂಡ ಮೂರನೇ ಮಹಿಳೆ ಎಂಬ ಮತ್ತೊಂದು ಗೌರವವನ್ನೂ ಅವರು ಗಳಿಸಿದರು.

You cannot copy content of this page

Exit mobile version