Home ದೇಶ ಭಾರತದಲ್ಲಿ ಮುಸ್ಲಿಮರ ಮನೆ ಕೆಡವುದನ್ನು ಕೂಡಲೇ ನಿಲ್ಲಿಸಬೇಕು: ಅಮ್ನೆಸ್ಟಿ ಆಗ್ರಹ

ಭಾರತದಲ್ಲಿ ಮುಸ್ಲಿಮರ ಮನೆ ಕೆಡವುದನ್ನು ಕೂಡಲೇ ನಿಲ್ಲಿಸಬೇಕು: ಅಮ್ನೆಸ್ಟಿ ಆಗ್ರಹ

0

ನವದೆಹಲಿ: ಜೆಸಿಬಿ, ಬುಲ್ಡೋಜರ್ ಹಾಗೂ ಇನ್ನಿತರ ಯಂತ್ರಗಳನ್ನು ಬಳಸಿ ಮುಸ್ಲಿಮರ ಮನೆ, ಉದ್ಯಮ ಹಾಗೂ ಆರಾಧನ ಸ್ಥಳಗಳನ್ನು ಅಕ್ರಮವಾಗಿ ಧ್ವಂಸ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಭಾರತ ಸರ್ಕಾರವನ್ನು ಆಗ್ರಹಿಸಿದೆ.


ಭಾರತದಲ್ಲಿ ಯಾವ ಮುಸ್ಲಿಮರು ಪ್ರಶ್ನೆ ಮಾಡುತ್ತಾರೋ, ಮಾತನಾಡುತ್ತಾರೋ ಅಂಥವರ ಮನೆಗಳನ್ನು ಏನಾದರೂ ಕಾರಣ ಹುಡುಕಿ ಕೆಡವಲಾಗುತ್ತದೆ ಎಂದಿರುವ ಅಮ್ನೆಸ್ಟಿ, ಭಾರತದಲ್ಲಿ ಬುಲ್ಡೋಜರ್ ಅನ್ಯಾಯ ಹಾಗೂ ‘ಭಾರತದಲ್ಲಿ ಬುಲ್ಡೋಜರ್ ಅನ್ಯಾಯದಲ್ಲಿ ಜೆಸಿಬಿ ಪಾತ್ರ ಮತ್ತು ಜವಾಬ್ದಾರಿ’ ಎನ್ನುವ ಎರಡು ವರದಿಗಳನ್ನು ಆಮ್ನೆಸ್ಟಿ ಪ್ರಟಕಟಿಸಿದೆ.


ಕನಿಷ್ಠ 5 ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಮನೆ ಕೆಡುವುದರ ಮೂಲಕ ‘ದ್ವಂಸ ಶಿಕ್ಷೆʼಯನ್ನು ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಪ್ರಚಾರದಲ್ಲಿ, ಜೆಸಿಬಿ, ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ.


ಕಾನೂನು ಬಾಹಿರವಾಗಿ ಜನರ ಮನೆಗಳ ಕೆಡವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಲ್ಲಿಸಬೇಕು. ಬಲವಂತದ ಒಕ್ಕಲೆಬ್ಬಿಸುವುವಿಕೆಯಿಂದ ಯಾರನ್ನೂ ನಿರಾಶ್ರಿತರನ್ನಾಗಿ ಮಾಡಬಾರದು ಎಂದು ಹೇಳಿದೆ. ಇಂತಹ ಧ್ವಂಸಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಉಲ್ಲಂಘನೆಗೆ ಕಾರಣರಾದವರನ್ನು ಜವಾಬ್ದಾರರನ್ನಾಗಿ ಮಾಡಿ ಶಿಕ್ಷಿಸಬೇಕು ಎಂದು ಆಮ್ನೆಸ್ಟಿ ಒತ್ತಾಯಿಸಿದೆ.


ರಾಜಕೀಯ ನಾಯಕರು ಮತ್ತು ಮಾಧ್ಯಮಗಳಿಂದ ‘ಬುಲ್ಡೋಜರ್ ನ್ಯಾಯ’ ಎಂಬಂತೆ ಭಾರತೀಯ ಅಧಿಕಾರಿಗಳು, ಮುಸ್ಲಿಮರ ಆಸ್ತಿಗಳನ್ನು ಕಾನೂನುಬಾಹಿರವಾಗಿ ಕೆಡವಿರುವುದು ಕ್ರೂರ ಮತ್ತು ಭಯಾನಕ. ಅಂತಹ ಕ್ರಮ ತೀವ್ರ ಅನ್ಯಾಯಕಾರಿಯಾಗಿದೆ. ಕಾನೂನುಬಾಹಿರ ಮತ್ತು ತಾರತಮ್ಯವಾಗಿದೆ. ಅವರು ಕುಟುಂಬಗಳನ್ನು ನಾಶಪಡಿಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮರ್ಡ್ ವರದಿಯಲ್ಲಿ ಹೇಳಿದ್ದಾರೆ.

You cannot copy content of this page

Exit mobile version