ದೆಹಲಿ : ದೇಶಾದ್ಯಂತ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಕಾರ್ಟೆಲ್‌ನ ಇಬ್ಬರು ಪ್ರಮುಖ ಸದಸ್ಯರನ್ನು ಬಿಹಾರ ಪೋಲೀಸರು ಬಂಧಿಸಿದ್ದಾರೆ.
ಅಂತಾರಾಷ್ಟ್ರೀಯ ಮಾದಕ ವಸ್ತುಗಳನ್ನು ಭೇದಿಸಿದ್ದು, ಕಾರ್ಟೆಲ್‌ನ ಅಭಿಷೇಕ್ ರಾಜ ಮತ್ತು ನಿಜಾಮುದ್ದೀನ್ ಎಂಬ ಇಬ್ಬರು ಪ್ರಮುಖ ಸದಸ್ಯರನ್ನು ಬಿಹಾರದಿಂದ ಬಂಧಿಸಲಾಗಿದೆ. ಹೆರಾಯಿನ್ ಮತ್ತು ಆಫೀಮನ್ನು ಮ್ಯಾನ್ಮಾರ್‌ನಿಂದ ಮಣಿಪುರದ ಮೂಲಕ ಭಾರತಕ್ಕೆ ಸಾಗಣೆ ಮಾಡಿದ್ದ 20 ಕೆಜಿ( 10 ಕೆಜಿ ಹೆರಾಯಿನ್ ಮತ್ತು 10 ಕೆಜಿ ಅಫೀಮು) ಮಾದಕ ವಸ್ತುಗಳು, ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂತಾರಾಷ್ಟ್ರೀಯ ಮೌಲ್ಯ 60 ಕೋಟಿ ರೂ ಆಗಿದೆ. ಬಂಧಿತ ಆರೋಪಿಗಳು ತಮ್ಮ ಸಹಚರರೊಂದಿಗೆ ಕಳೆದ ಮೂರು ವರ್ಷಗಳಿಂದ ದೆಹಲಿ ಎನ್‌ಸಿಆರ್ ಮತ್ತು ಇತರ ರಾಜ್ಯಗಳಲ್ಲಿ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದಾರೆ ಎಂದು ದೆಹಲಿ ವಿಶೇಷ ಸೆಲ್ ಮಾಧ್ಯಮಗಳಿಗೆ ತಿಳಿಸಿದೆ.