ಚಾಮರಾಜನಗರ : ಚಾಮರಾಜನಗರದ ಗುಂಡ್ಲುಪೇಟೆಯಿಂದ ಶುರುವಾಗಿರುವ ʼಭಾರತ ಐಕ್ಯತಾ ಯಾತ್ರೆʼಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರಿಗೆ ಸಾಹಿತಿ ದೇವನೂರು ಮಹಾದೇವ ಅವರು ಸಂವಿಧಾನ ಪ್ರತಿಯನ್ನು ಹಸ್ತಾಂತರ ಮಾಡಿದ್ದಾರೆ.

ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಶುರುವಾಗಿರುವ ʼಭಾರತ ಬೃಹತ್ ಐಕ್ಯತಾ ಯಾತ್ರೆʼಗೆ ಕಾಂಗ್ರೆಸ್ ಮುಖಂಡರಿಂದ ಭರ್ಜರಿ ಸ್ವಾಗತ ದೊರಕಿದ್ದು, ರಾಹುಲ್ ಗಾಂಧಿಯವರು ನಗಾರಿಯನ್ನು ಬಾರಿಸುವುದರ ಮುಖಾಂತರ ಅಲ್ಲಿನ ಸಮಾವೇಶವನ್ನು ಉದ್ಘಾಟಿಸಿದರು.
ಸಮಾವೇಶದ ವೇದಿಕೆ ಮೇಲೆ ಆಗಮಿಸಿದ ರಾಹುಲ್‌ಗಾಂಧಿಯವರಿಗೆ ಸ್ವರಾಜ್ ಪಾರ್ಟಿಯ ಯೋಗೇಂದ್ರ ಯಾದವ್‌ರವರು ಸಂವಿಧಾನ ಪೀಠಿಕೆಯ ಪ್ರತಿಯನ್ನು ಹಸ್ತಾಂತರ ಮಾಡಿದ್ದಾರೆ. ಹಾಗೆಯೇ ಕನ್ನಡ ಮಣ್ಣಿನ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತಿ ದೇವನೂರು ಮಹಾದೇವನವರು ರಾಹುಲ್ ಗಾಂಧಿಯವರಿಗೆ ಭಾರತದ ಸಂವಿಧಾನ ಪ್ರತಿಯನ್ನು ಸ್ವತಃ ತಮ್ಮ ಕೈಯ್ಯಾರೆ ಹಸ್ತಾಂತರ ಮಾಡಿ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನು ನೋಡಿ : ಭಾರತ ಐಕ್ಯತಾ ಯಾತ್ರೆಗೆ ಹೆಚ್ಚೆಚ್ಚು ಜನ ಭಾಗವಹಿಸಿ, ಬೆಂಬಲಿಸಿ: ಸಿದ್ದರಾಮಯ್ಯ