Home ಬೆಂಗಳೂರು ಭಾನುವಾರ ‘ನಮ್ಮ ಮೆಟ್ರೋ’ ಸಂಚಾರದಲ್ಲಿ ವ್ಯತ್ಯಯ – ಪ್ರಯಾಣಿಕರಿಗೆ ಬಿಎಂಆರ್‌ಸಿಲ್ ಸೂಚನೆ

ಭಾನುವಾರ ‘ನಮ್ಮ ಮೆಟ್ರೋ’ ಸಂಚಾರದಲ್ಲಿ ವ್ಯತ್ಯಯ – ಪ್ರಯಾಣಿಕರಿಗೆ ಬಿಎಂಆರ್‌ಸಿಲ್ ಸೂಚನೆ

0

ಬೆಂಗಳೂರು: ಭಾನುವಾರ (ಏಪ್ರಿಲ್ 5) ಬೆಳಿಗ್ಗೆ 2 ಗಂಟೆಗಳ ಕಾಲ ‘ನಮ್ಮ ಮೆಟ್ರೋ’ ಸೇವೆಯಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.

ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಬೆಳಿಗ್ಗೆ 7.00ರಿಂದ 9.00ರವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

ಆದರೆ ಇತರೆ ಮಾರ್ಗಗಳಲ್ಲಿ ಮೆಟ್ರೋ ಸೇವೆ ಎಂದಿನಂತೆ ಲಭ್ಯವಾಗಲಿದೆ. ಚಲ್ಲಘಟ್ಟದಿಂದ ಮೈಸೂರು ರಸ್ತೆ, ಮಜೆಸ್ಟಿಕ್‌ನಿಂದ ವೈಟೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಹಾಗೂ ಆರ್.ವಿ. ರಸ್ತೆದಿಂದ ಬೊಮ್ಮಸಂದ್ರ ನಡುವಿನ ಸೇವೆಗಳು ಬೆಳಿಗ್ಗೆ 7 ಗಂಟೆಯಿಂದ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.

ಬೆಳಿಗ್ಗೆ 9 ಗಂಟೆಯ ನಂತರ ಮಜೆಸ್ಟಿಕ್–ಮೈಸೂರು ರಸ್ತೆ ವಿಭಾಗದಲ್ಲಿಯೂ ಮೆಟ್ರೋ ಸೇವೆ ಮರುಾರಂಭವಾಗಿ ಸಾಮಾನ್ಯವಾಗಿ ನಡೆಯಲಿದೆ ಎಂದು ಬಿಎಂಆರ್‌ಸಿಲ್ ಸ್ಪಷ್ಟಪಡಿಸಿದೆ.

ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಲ್ ಮನವಿ ಮಾಡಿದೆ.

You cannot copy content of this page

Exit mobile version