ಹಾಸನ : ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಹಳೆ ಮಟನ್ ಮಾರ್ಕೇಟ್ ವೃತ್ತದಲ್ಲಿರುವ ಸುತ್ತ ಮತ್ತಲ ಮುಸ್ಲಿಂ ಮತ್ತು ಹಿಂದೂ ಸ್ಥಳೀಯ ಚಿಕ್ಕಪುಟ್ಟ ವ್ಯಾಪಾರಸ್ತರು, ಆಟೋ ಚಾಲಕರು ಸೇರಿ ವಿವಿಧ ಹಣ್ಣುಗಳನ್ನು ಸ್ಥಳದಲ್ಲಿಯೇ ಕತ್ತರಿಸಿ ಬಂದವರಿಗೆಲ್ಲಾ ವಿತರಣೆ ಮಾಡಿದರು.
ನಂತರ ಮಾಧ್ಯಮದೊಂದಿಗೆ ಪರ‍್ವೀಸ್ ಮತ್ತು ಸಾಧೀಕ್ ಮಾಧ್ಯಮದೊಂದಿಗೆ ಮಾತನಾಡಿ, ಮಹಾಮದ್ ಫೈಗಂಬರ್ ಹುಟ್ಟಿದ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೀವಿ. ಇದರ ಅಂಗವಾಗಿ ಕಳೆದ ಐದಾರು ವರ್ಷಗಳಿಂದಲೂ ಜಾತಿ ಬೇದ ಇಲ್ಲದೇ ಆಚರಣೆಯನ್ನು ಎಲ್ಲಾರೂ ಸೇರಿ ಶಾಂತ ರೀತಿಯಲ್ಲಿ ಮಾಡುತ್ತಿದ್ದು, ಕೃಷ್ಣ ಆಸ್ಪತ್ರೆ ಬಳಿ ಹಳೆ ಮಟನ್ ಮಾರ್ಕೇಟ್ ಸುತ್ತ ಮುತ್ತಲ ಸಣ್ಣ ವ್ಯಾಪಾರಸ್ತರು, ಆಟೋ ಚಾಲಕರು ಎಲ್ಲಾರು ಸೇರಿ ವಿವಿಧ ರೀತಿಯ ಹಣ್ಣನ್ನು ನೀಡಿದ್ದಾರೆ ಎಂದರು. ಹಳೆ ಮಟನ್ ವೃತ್ತಲ್ಲಿ ಹಿಂದೂ ಮುಸ್ಲಿಂ ಎನ್ನದೇ ಎಲ್ಲಾರೂ ಅಣ್ಣ ತಮ್ಮಂದಿರಂತೆ ಒಟ್ಟಿಗೆ ಸೇರಿ ಇಂತಹ ಆಚರಣೆಗೆ ನಮ್ಮ ಜೊತೆ ಕೈಜೋಡಿಸುತ್ತಿದ್ದಾರೆ. ಯಾವ ವರ್ಗದ ಜನರ ಎಂದಲ್ಲ. ಎಲ್ಲಾ ವರ್ಗದವರು ಆಚರಿಸಲಾಗುತ್ತಿದೆ ಎಂದು ಹೇಳಿದರು.