ಧರ್ಮಸ್ಥಳ ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. SIT ಈಗಾಗಲೇ ಅದನ್ನು ನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದರು. SIT ತಂಡದಲ್ಲಿರುವವರೂ ಪೊಲೀಸರೇ.. NIA ಗೆ ವಹಿಸಿದರೂ ಅವರೂ ಪೊಲೀಸರೇ ಅಲ್ವೇ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಹಿಂದೂ ಮತ್ತು ಜೈನ ಸನ್ಯಾಸಿಗಳ ಬೇಡಿಕೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ, “ನಾವು ಎಸ್‌ಐಟಿ ರಚಿಸಿದ್ದೇವೆ, ಅವರು ಪೊಲೀಸರೇ.. ಎನ್‌ಐಎಯಲ್ಲಿ ಯಾರಿದ್ದಾರೆ? ಅವರೂ ಪೊಲೀಸರೇ” ಎಂದು ಹೇಳಿದರು.
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೂಡ ಎನ್ಐಎ ತನಿಖೆಗೆ ಒತ್ತಾಯಿಸಿವೆ , ಕಾಂಗ್ರೆಸ್ ಸರ್ಕಾರವು ಈ ವಿಷಯವನ್ನು ತಪ್ಪಾಗಿ ನಿರ್ವಹಿಸಿದೆ ಎಂದು ಆರೋಪಿಸಿ, ಈ ಆರೋಪಗಳು ಧರ್ಮಸ್ಥಳ ಮತ್ತು ಅದರ ಸ್ಥಳೀಯ ದೇವಾಲಯವನ್ನು ಕೆಡಿಸುವ ಪಿತೂರಿಯ ಭಾಗವಾಗಿದೆ ಎಂದು ಕರೆದಿವೆ.
“ನಾವು ಇದರ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿದ್ದೇವೆ. ಈ ಹಿಂದೆ, ಅವರು (ಧಾರ್ಮಿಕ ಮುಖಂಡರು) ಎಸ್‌ಐಟಿ ತನಿಖೆಯೇ ಸರಿಯಾಗಿಲ್ಲ ಎಂದು ಹೇಳುತ್ತಿದ್ದರು. ಈಗ ಅವರು ಈ ವಿಷಯವನ್ನು ಎನ್‌ಐಎಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದು ಕೂಡ ತನಿಖೆಯೇ ಅಲ್ಲವೇ?” ಎಂದು ಅವರು ಕೇಳಿದರು.