Home ವಿದೇಶ “ಭಾರತ ಮತ್ತು ರಷ್ಯಾ, ಚೀನಾದಲ್ಲಿ ಕಳೆದು ಹೋಗಿವೆ” ; ಟ್ರಂಪ್ ಮಾರ್ಮಿಕ ಟ್ವಿಟ್ ಹಿಂದಿನ ಉದ್ದೇಶವೇನು?

“ಭಾರತ ಮತ್ತು ರಷ್ಯಾ, ಚೀನಾದಲ್ಲಿ ಕಳೆದು ಹೋಗಿವೆ” ; ಟ್ರಂಪ್ ಮಾರ್ಮಿಕ ಟ್ವಿಟ್ ಹಿಂದಿನ ಉದ್ದೇಶವೇನು?

0

ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ನಾಯಕ ಪುಟಿನ್ ನಡುವಿನ ಸ್ನೇಹಪರ ಪ್ರದರ್ಶನವನ್ನು ಗುರಿಯಾಗಿಸಿಕೊಂಡು ಮಾಡಿದ ಟ್ವಿಟ್ (X) ಈಗ ಜಾಗತಿಕವಾಗಿ ಗಮನ ಸೆಳೆಯುವಂತಾಗಿದೆ.

ಮೋದಿ-ಕ್ಸಿ-ಪುಟಿನ್ ಈ ಮೂರೂ ನಾಯಕರುಗಳ ಫೋಟೋವನ್ನು ಹಂಚಿಕೊಂಡ ಟ್ರಂಪ್, “ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕತ್ತಲೆಯಾದ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರೆಲ್ಲರೂ ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ!” ಎಂದು ಬರೆದಿದ್ದಾರೆ.

ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ದ್ವಿಗುಣಗೊಳಿಸಿದ ನಂತರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಕುಸಿತದ ಹಾದಿಯಲ್ಲಿವೆ, ಇದು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಸುಂಕದ ಹೊರೆ ಎನ್ನಿಸಿದೆ.

ಇದೇ ಸಂದರ್ಭದಲ್ಲಿ ಟ್ರಂಪ್ ದುಬಾರಿ ಸುಂಕಗಳ ವಿರುದ್ಧದ ಸ್ಪಷ್ಟ ಧಿಕ್ಕಾರದ ಸಂದೇಶವೆಂದು ಪರಿಗಣಿಸಲಾದ SCO ಶೃಂಗಸಭೆಯ ಕೆಲವೇ ದಿನಗಳ ನಂತರ ಟ್ರಂಪ್ ಕಡೆಯಿಂದ ಈ ಹೇಳಿಕೆ ಬಂದಿದೆ. ಕಳೆದ ಎರಡು ದಶಕಗಳಲ್ಲಿ ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಅತ್ಯಂತ ಕೆಟ್ಟ ಹಂತದ ಸಂಬಂಧದ ಸಮಯದಲ್ಲಿ ಬಂದಿರುವ ಟ್ವಿಟ್ ಹಿಂದೆ ಅಮೇರಿಕಾ ಬೇರೆಯದೇ ಉದ್ದೇಶ ಹೊಂದಿದಂತಿದೆ.

“ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ, ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ” ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

You cannot copy content of this page

Exit mobile version