ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಇರುವ, 32,000 ಕೋಟಿ ರೂಪಾಯಿಯನ್ನು ಶೀಘ್ರದಲ್ಲೇ ಪಾವತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಗುತ್ತಿಗೆದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮಂಗಳವಾರ ರಾಜ್ಯ ಗುತ್ತಿಗೆದಾರರ ಪ್ರತಿನಿಧಿಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭೇಟಿಯ ನಂತರ ಈ ಭರವಸೆ ನೀಡಿದ್ದಾರೆ.
‘ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ನಮ್ಮ ಎಲ್ಲಾ ಬಾಕಿ ಬಿಲ್‌ಗಳನ್ನು ಪಾವತಿಸಲಾಗುವುದು ಎಂದಿದ್ದಾರೆ. ಆದರೆ ನಿರ್ದಿಷ್ಟವಾಗಿ ಸದ್ಯಕ್ಕೆ ಸಮಯ ನಿಗದಿಪಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಅವರು ಹೇಳಿದಂತೆ ಶೀಘ್ರದಲ್ಲೇ ಬಿಲ್ ಪಾವತಿಸುವ ನಂಬಿಕೆ ಕೂಡ ಇದೆ’ ಎಂದು ಗುತ್ತಿಗೆದಾರರ ನಿಯೋಗದ ನೇತೃತ್ವ ವಹಿಸಿದ್ದ, KSCA ಅಧ್ಯಕ್ಷ ಆರ್. ಮಂಜುನಾಥ್
‘ಸರ್ಕಾರ ಹೊಸ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಿದೆ ಎಂಬ ದೃಢತೆ ಕೂಡ ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು’ ಎಂದು ಗುತ್ತಿಗೆದಾರರ ಅಧ್ಯಕ್ಷ ಆರ್. ಮಂಜುನಾಥ್ ತಿಳಿಸಿದ್ದಾರೆ.
ಕಳೆದ ತಿಂಗಳು ಕೂಡ ಗುತ್ತಿಗೆದಾರರು ಸಣ್ಣ ನೀರಾವರಿ ಸಚಿವ ಬೋಸರಾಜು ಅವರನ್ನು ಭೇಟಿ ಮಾಡಿದ್ದರು. ಆಗ ಕೂಡ ಗುತ್ತಿಗೆದಾರರಿಗೆ ಇರುವ ಬಾಕಿ ಬಿಲ್‌ಗಳನ್ನು ಶೀಘ್ರವಾಗಿ ಪಾವತಿಸಲಾಗುವುದು ಎಂದು, ಸಚಿವರು ಭರವಸೆ ನೀಡಿದ್ದರು.