ದೆಹಲಿ : ನಿನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಾಕುಂಭ ಮೇಳದಲ್ಲಿ ತಮ್ಮ ಪತ್ನಿ ಜೊತೆ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ್ದು, ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗಂಗೆಯಲ್ಲಿ ಮಿಂದೆದ್ದರೆ ಪಾಪ ಕಳೆಯಲ್ಲ ಸ್ವರ್ಗಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಹೋಗಲ್ಲ ಎಂದು ಖರ್ಗೆ ಅವರು ಇತ್ತೀಚೆಗೆ ಟೀಕಿಸಿದ್ದರು. ಈ ವಿಚಾರವಾಗಿ ಯತ್ನಾಳ್ ಟಾಂಗ್ ನೀಡಿದ್ದು, ಈಗ ಡಿಕೆಶಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರಲ್ವಾ? ಖರ್ಗೆ ಅವರೇ ಈ ಬಗ್ಗೆ ಮಾತನಾಡಲಿ ಎಂದಿದ್ದಾರೆ.ಡಿಕೆಶಿ ಪುಣ್ಯ ಸ್ನಾನ ಮಾಡಿದ ಬಳಿಕ ಎಷ್ಟು ಪಾಪ ಕಳೆಯಿತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವರದಿ ಪಡೆಯಲಿ ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೇ ಭಕ್ತಿ ಎಂಬುವುದು ಅವರವರ ಭಾವನೆ, ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು. ಅದರ ಬಗ್ಗೆ ಮಾತನಾಡಬಾರದು ಎಂದೂ ಕಾಂಗ್ರೆಸ್ಗೆ ಚಾಟಿ ಬೀಸಿದ್ದಾರೆ. ಇನ್ನು ಕಾಂಗ್ರೆಸ್ ತಾವು ಮುಸ್ಲಿಂಮರಿಂದ ಗೆಲುವು ಸಾಧಿಸಿದ್ದು ಅಂತಾ ಹೇಳಿಕೊಳ್ಳುತ್ತಾರೆ, ಆದರೆ ಅವರಿಗೆ ಹಿಂದೂಗಳೇ ಮತದಾನ ಮಾಡುವುದು ಎಂಬ ವಿಷಯ ನೆನಪಿರಲಿ ಎಂದು ಯತ್ನಾಳ್ ಕುಟುಕಿದ್ದಾರೆ.