ಹೊಸದೆಹಲಿ: ಆರ್ಥಿಕ ಅಪರಾಧಗಳ ಆರೋಪಿಗಳಿಗೆ ಬೇಡಿ ಹಾಕಬಾರದು ಮತ್ತು ಅವರನ್ನು ಕೊಲೆ ಮತ್ತು ಅತ್ಯಾಚಾರದಂತಹ ಅಪರಾಧಗಳ ಆರೋಪಿಗಳೊಂದಿಗೆ ಜೈಲಿನಲ್ಲಿ ಇಡಬಾರದು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಬೇಡಿಗಳು ಗಂಭೀರ ಅಪರಾಧಗಳಲ್ಲಿ ತಪ್ಪಿತಸ್ಥರು ತಪ್ಪಿಸಿಕೊಳ್ಳುವುದನ್ನು ತಡೆಯಲು ಹಾಗೂ ಬಂಧನದ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಸೀಮಿತವಾಗಿರಬೇಕು ಎಂದು ಅದು ವಿವರಿಸಿದೆ. ಅಲ್ಲದೆ, ಆರೋಪಿಗಳನ್ನು ಬಂಧಿಸಿದ ನಂತರ 15 ದಿನಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿ ಇಡಬಾರದು ಎಂಬ ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆಯ (BNSS) ನಿಬಂಧನೆಗೆ ತಿದ್ದುಪಡಿಗಳನ್ನು ಸೂಚಿಸಿದೆ.