Home ದೆಹಲಿ AI ಮತ್ತು ಚಾಟ್‌ಜಿಪಿಟಿ ಬಳಸಬೇಡಿ: ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ

AI ಮತ್ತು ಚಾಟ್‌ಜಿಪಿಟಿ ಬಳಸಬೇಡಿ: ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ

0

ಕೇಂದ್ರ ಸರ್ಕಾರದ ನೌಕರರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಚಾಟ್‌ಜಿಪಿಟಿ ತಂತ್ರಜ್ಞಾನಗಳನ್ನು ಬಳಸದಂತೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ವೇದಿಕೆಗಳ ಮೂಲಕ ದೇಶದ ಅತ್ಯಂತ ರಹಸ್ಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸರ್ಕಾರಕ್ಕೆ ಸಂಬಂಧಿಸಿದ ಅಧಿಕೃತ ದತ್ತಾಂಶಗಳನ್ನು ಮತ್ತು ಮಾಹಿತಿಯನ್ನು ಸುಧಾರಿಸುವ ಅಥವಾ ಸರಿಯಾಗಿ ರೂಪಿಸುವ ಉದ್ದೇಶದಿಂದ ಕೆಲವು ಅಧಿಕಾರಿಗಳು ಇವುಗಳನ್ನು ಬಳಸುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿದೆ. ಇಂತಹ ಪ್ರಕ್ರಿಯೆಯಿಂದಾಗಿ ಸರ್ಕಾರದ ಕ್ರಮಗಳು, ಯೋಜನೆಗಳು ಮತ್ತು ಇತರ ಪ್ರಮುಖ ವಿಚಾರಗಳು ಪರಕೀಯ ದೇಶಗಳ ಕೈ ಸೇರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಕುರಿತು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು, ಸರ್ಕಾರಿ ಉದ್ಯೋಗಿಗಳು ಯಾವುದೇ ಕಾರಣಕ್ಕೂ ಇಂತಹ ವೇದಿಕೆಗಳಲ್ಲಿ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸೈಬರ್ ಭದ್ರತೆಯನ್ನು ಬಲಪಡಿಸಲು ಮತ್ತು ಇಂತಹ ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಸರ್ಕಾರವು ಪಟ್ಟಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಸಭೆಗೆ ವಿವರಿಸಿದರು.

You cannot copy content of this page

Exit mobile version