ಹಾಸನ : ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿದರು. ನಮ್ಮ ಪಕ್ಷದಲ್ಲಿ ಏನಾಗಿದೆ?ನಾನು ಅವರನ್ನು ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು? ಇದರಲ್ಲಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, ಆದರೆ ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ರ‍್ಸನಲ್ ಅಜೆಂಡಾ ಇರಬಹುದು, ಎಂದೂ ಹೇಳಿದರು.ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಗೊಂದಲಗಳಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.
ಬಿಜೆಪಿಯ ಬಣ ರಾಜಕೀಯ:ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ನೀಡುವುದು ತಪ್ಪು. ಬಿಜೆಪಿ ಹೈಕಮಾಂಡ್ ಇದೆ, ಅವರು ಸರಿಪಡಿಸಿಕೊಳ್ಳುತ್ತಾರೆ, ಎಂದು ಬಿಜೆಪಿ ಒಳಜಗಳದ ಬಗ್ಗೆ ಮಾತನಾಡಲು ನಿರಾಕರಿಸಿದರು.
ಹಾಸನ ಜಿಲ್ಲೆಯ ಬಜೆಟ್ ನಿರೀಕ್ಷೆಗಳು: “ಬಜೆಟ್‌ನಲ್ಲಿ ಯೋಜನೆ, ಅನುದಾನ ಬರದೇ ಇರಬಹುದು. ಆದರೆ ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ರ‍್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ರಾಜ್ಯ ರ‍್ಕಾರ ಸ್ಪಂದಿಸಬೇಕು,” ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.