ದೆಹಲಿ: ಭೂಕಂಪನದ ಕೇಂದ್ರವನ್ನು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರವು ನೇಪಾಳದ ಗಡಿಯಲ್ಲಿರುವ ಉತ್ತರಾಖಂಡದ ಪಿಥೋರಗಢ್‌ನ ಆಗ್ನೇಯಕ್ಕೆ 90 ಕಿ.ಮೀ ದೂರದಲ್ಲಿದೆ ಎಂದು ಗುರುತಿಸಿದೆ.
ನೇಪಾಳದ ಗಡಿಯ ಗುಂಟ ಉತ್ತರಾಖಂಡದ ಪಿಥೋರಗಢ್ ಬಳಿಯ ಹಿಮಾಲಯ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಬುಧವಾರದ ಬೆಳಗಿನ ಜಾವ ಉತ್ತರ ಭಾರತದಾದ್ಯಂತ ಬಲವಾದ ಕಂಪನಗಳು ಜನರ ಅನುಭವಕ್ಕೆ ಬಂದವು.
ಭೂಕಂಪನದ ಕೇಂದ್ರಬಿಂದುವು ನೇಪಾಳದಲ್ಲಿದ್ದು, ಉತ್ತರಾಖಂಡದ ಪಿಥೋರಗಢ್‌ನ ಪೂರ್ವ-ಆಗ್ನೇಯಕ್ಕೆ ಸುಮಾರು 90 ಕಿಮೀ ದೂರದಲ್ಲಿ ಬುಧವಾರ ಮುಂಜಾನೆ 1.57 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ದೆಹಲಿ ಮತ್ತು ಗಾಜಿಯಾಬಾದ್ ಮತ್ತು ಗುರುಗ್ರಾಮ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಲಕ್ನೋದಲ್ಲಿ ಸಹ ಕಂಪನದ ಅನುಭವವಾಗಿದ್ದು, ಜನರು ತಮ್ಮ ನಿದ್ದೆಯಿಂದೆದ್ದು ಗಾಬರಿಗೊಳಗಾಗಿದ್ದಾರೆಂದು ವರದಿಗಳು ಹೇಳಿವೆ.
ಉತ್ತರಾಖಂಡದ ಹಿಮಾಲಯ ಪ್ರದೇಶ ಮತ್ತು ನೇಪಾಳದ ಸುತ್ತಮುತ್ತ ಕಳೆದೆರಡು ದಿನಗಳಿಂದ ಕಡಿಮೆ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿವೆ. ಈ ಪ್ರದೇಶವು ಮಂಗಳವಾರ ಸಂಜೆ 4.9 ಮತ್ತು 3.5 ತೀವ್ರತೆಯ ಕನಿಷ್ಠ ಎರಡು ಭೂಕಂಪನಗಳಿಗೆ ಸಾಕ್ಷಿಯಾಗಿವೆಯೆಂದು ಎಂದು NCS ಡೇಟಾ ಹೇಳುತ್ತದೆ.