ಎದೆಗೆ ನಾಟುವ “TALE OF TWO KIDS”

ಕೆಲವು ಕಿರುಚಿತ್ರಗಳು ಮನಸ್ಸಿಗೆ ನಾಟುವುದರ ಜೊತೆಗೆ ನಿರ್ದೇಶಕನಲ್ಲಿನ ಕಲೆಯ ಬಗ್ಗೆ ಒಂದು ಕ್ಷಣ ಯೋಚಿಸುವಂತೆ ಮಾಡಿಬಿಡುತ್ತವೆ. ಅಂತಹದ್ದೇ ಒಂದು ಕಿರುಚಿತ್ರ “TALE OF TWO KIDS”. ಸಂಭಾಷಣೆಯೇ ಇಲ್ಲದೆ ಕಥೆಯ ವಸ್ತುವನ್ನು ಹೇಗೆ ಜನರಿಗೆ ತಲುಪಿಸಬಹುದು ಎಂಬುದನ್ನು ನಿರ್ದೇಶಕ ಶಶಾಂಕ್‌ ಬಿ.ಪಿ ಬಹಳ ಸ್ಪಷ್ಟವಾಗಿ ಮನಮುಟ್ಟುವಂತೆ ಈ ಕಿರುಚಿತ್ರದಲ್ಲಿ ಮಾಡಿ ತೋರಿಸಿದ್ದಾರೆ.

ಈ ಕಿರುಚಿತ್ರ ನೋಡಿದ ನಂತರ “ಜೆನ್‌ ಜಿ ಕಿಡ್‌ ಒಬ್ಬ ನಮ್ಮೆದೆಗಳನ್ನು ಒಂದು ಕ್ಷಣ ಅಲುಗಾಡಿಸಬಿಟ್ಟ” ಎಂದೆನಿಸುತ್ತದೆ. ಇನ್ನು ಈ ಕಿರು ಚಿತ್ರದ ಬಗ್ಗೆ ಹೇಳುವುದಾರೆ, ಶೀರ್ಷಿಕೆಯೇ ಹೇಳುವಂತೆ ಇಬ್ಬರು ಪುಟ್ಟ ಮಕ್ಕಳ ಕಥೆ. ಆರಂಭದಲ್ಲೇ ಹಳ್ಳಿಯ ವಾತಾವರಣ ಹೇಗಿದೆ ಎಂಬುದನ್ನ ಅಷ್ಟೇ ತೋರಿಸದೆ ಅಲ್ಲಿನ ಪರಿಸರ ಹಾಗು ಗುಡಿಸಲು ಮನೆಗಳನ್ನು ತೋರಿಸವುದರೋಂದಿಗೆ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಸುವ ಪ್ರಯತ್ನ ಯಶಸ್ವಿಯ ಆಗಿದೆ ಎಂದೇ ಹೇಳಬೇಕು.

ಪುಟ್ಟ ಮಕ್ಕಳಲ್ಲಿನ ಆಸೆ, ಆ ಆಸೆಯನ್ನು ತೀರಿಸುವಲ್ಲಿ ತಾಯಿಯ ಪಾತ್ರ, ಒಂದು ಸೀರೆಯ ಕನಸು ಹೊತ್ತಿರುವ ತಾಯಿಯ ತ್ಯಾಗ, ಸಣ್ಣ ಸಣ್ಣ ಆಸೆಯು ತೀರಿದಾಗ ಮಕ್ಕಳಲ್ಲಿ ಮೂರುವ ನಗು, ತಮ್ಮ ಆಸೆಗಳನ್ನು ತೀರಿಸುತ್ತಿರುವುದು ದೇವರೆಂದು ನಂಬುವ ಮಕ್ಕಳಲ್ಲಿನ ಮುಗ್ದತೆ ಇದೆಲ್ಲವೂ ಒಂದು ಕ್ಷಣ ನಿಮ್ಮನ್ನು ಹಿಡಿದಿಡುತ್ತವೆ.

ಸತ್ಯದ ಅರಿವಾದಾಗ ಪುಟ್ಟ ಮಗುವಿನಲ್ಲಿ ಆದ ಬದಲಾವಣೆ ಅವನ ಮುಖದಲ್ಲಿ ಮೂಡುವ ನಗು ನಿಮ್ಮನ್ನು ಮೂಕನನ್ನಾಗಿಸುತ್ತದೆ. ಮುದ ನೀಡಬಲ್ಲ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಗಳ ನಟನೆ ಎಲ್ಲದಕ್ಕೂ ಸಲಾಂ.

ಭರವಸೆ ಮೂಡಿಸಬಲ್ಲ ಮತ್ತೊಬ್ಬ ನಿರ್ದೇಶಕ ಕನ್ನಡದ ನೆಲಕ್ಕೆ ಸಿಕ್ಕಿರುವುದು ಖುಷಿಯ ಸಂಗತಿ. ಮನಮುಟ್ಟುವಂತಹ ಚಿತ್ರಗಳು ಮತ್ತಷ್ಟು ಮೂಡಿಬರಲಿ ಎಂಬುದು ನಮ್ಮ ಹಾರೈಕೆ.

Related Articles

ಇತ್ತೀಚಿನ ಸುದ್ದಿಗಳು