Home ಇನ್ನಷ್ಟು ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ...

ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ ನೋಟಿಸ್

0

“..35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ “ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ”ದ ಎಚ್ಚರಿಕೆ ನೀಡಿದೆ ಚುನಾವಣಾ ಆಯೋಗ..” ಮುನೀರ್ ಕಾಟಿಪಳ್ಳ ಅವರ ಬರಹದಲ್ಲಿ

ನಿವೃತ್ತ ಐಎಎಸ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದ A B ಇಬ್ರಾಹಿಂ ಅವರಿಗೆ ಚುನಾವಣಾ ಆಯೋಗ ನೋಟೀಸು ನೀಡಿದೆ. ಸಂಬಂಧ ಪಟ್ಟ ಅಧಿಕಾರಿ ಮುಂದೆ ನಿರ್ದಿಷ್ಟ ದಿನಾಂಕದಂದು ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಹಳೆಯ ಹಾಗು ಈಗಿನ ಮತದಾರರ ಪಟ್ಟಿಯಲ್ಲಿ ನಮೂದಾದ ಹೆಸರಿನಲ್ಲಿನ ಸಣ್ಣ ವ್ಯತ್ಯಾಸದ ಕಾರಣಕ್ಕೆ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಚುನಾವಣಾ ಆಯೋಗಕ್ಕೆ ಅನುಮಾನ ಮೂಡಿದೆ.

35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ “ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ” ಹಾಗೆಯೆ “ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಸಂಬಂಧಿಸಿ ತಪ್ಪು ಮಾಹಿತಿ, ಸುಳ್ಳು ಘೋಷಣೆ ನೀಡುವುದು ಜೈಲು ಶಿಕ್ಷೆ ಮತ್ತು ದಂಡ ಪಾವತಿಯ ಅಪರಾಧ” ಎಂಬ ಎಚ್ಚರಿಕೆ ಪ್ರಕಟನೆ ಹೆಚ್ಚು ಘಾಸಿ ಉಂಟು ಮಾಡಿದೆ. ದೀರ್ಘಕಾಲ ಸರಕಾರಿ ಸೇವೆ ಒದಗಿಸಿ, ಜಿಲ್ಲಾ ಚುನಾವಣಾ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಈ ರೀತಿ ಬೆದರಿಸುವ ದಾಟಿಯ, ಕ್ರಿಮಿನಲ್ ತರಹ ಅನುಮಾನಿಸುವ ಅಂಶಗಳುಲ್ಲ ನೋಟೀಸು ಸಹಜವಾಗಿಯೆ ಆಘಾತ ತಂದಿದೆ.

“ಒಂದು SIR, ನೂರು ಕರಾಳ ಮುಖಗಳು” ನಾಗರಿಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿರುವ ವ್ಯವಸ್ಥೆ ಈ ರೀತಿ ನಡೆಸಿಕೊಳ್ಳುವುದರ ಕುರಿತು ರಾಜ್ಯದ ಪ್ರಧಾನ ರಾಜಕೀಯ ಪಕ್ಷಗಳು ಮೌನ ವಹಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

You cannot copy content of this page

Exit mobile version