Home ದೆಹಲಿ ಚುನಾವಣಾ ಖರ್ಚು: ಕಾಂಗ್ರೆಸ್‌ಗಿಂತ 3 ಪಟ್ಟು ಹೆಚ್ಚು ಹಣ ಸುರಿದ ಬಿಜೆಪಿ; ಜಾಹೀರಾತು, ಹೆಲಿಕಾಪ್ಟರ್‌ಗೆ ಕೋಟಿ...

ಚುನಾವಣಾ ಖರ್ಚು: ಕಾಂಗ್ರೆಸ್‌ಗಿಂತ 3 ಪಟ್ಟು ಹೆಚ್ಚು ಹಣ ಸುರಿದ ಬಿಜೆಪಿ; ಜಾಹೀರಾತು, ಹೆಲಿಕಾಪ್ಟರ್‌ಗೆ ಕೋಟಿ ಕೋಟಿ ವ್ಯಯ

0

ದೆಹಲಿ: 2024-25ನೇ ಸಾಲಿನಲ್ಲಿ ನಡೆದ ಚುನಾವಣೆಗಳಿಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬರೋಬ್ಬರಿ 3,335.36 ಕೋಟಿ ರೂ. ಖರ್ಚು ಮಾಡಿದೆ. ಇದು ಕಾಂಗ್ರೆಸ್ ಪಕ್ಷ ಖರ್ಚು ಮಾಡಿದ (896.22 ಕೋಟಿ ರೂ.) ಮೊತ್ತಕ್ಕಿಂತ ಸುಮಾರು 3.75 ಪಟ್ಟು ಹೆಚ್ಚಾಗಿದೆ ಎಂದು ಬಿಜೆಪಿಯ ಆಡಿಟ್ ವರದಿ ತಿಳಿಸಿದೆ.

ಲೋಕಸಭೆ ಹಾಗೂ 8 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದ 2024-25ರ ಸಾಲಿನಲ್ಲಿ ಬಿಜೆಪಿಗೆ ಒಟ್ಟು 6,769.14 ಕೋಟಿ ರೂ. ಆದಾಯ ಹರಿದುಬಂದಿದೆ. ಇದರಲ್ಲಿ ದೇಣಿಗೆ ರೂಪದಲ್ಲೇ 6,124.85 ಕೋಟಿ ರೂ. ಸಂಗ್ರಹವಾಗಿದೆ. ಪಕ್ಷದ ಒಟ್ಟು ಖರ್ಚು 3,774.58 ಕೋಟಿ ರೂ. ಆಗಿದ್ದು, ಖರ್ಚು ಕಳೆದು ಇನ್ನೂ 2,994.56 ಕೋಟಿ ರೂ. ಉಳಿಕೆ (Surplus) ಇದೆ. ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷದ ಆದಾಯ 918.28 ಕೋಟಿ ರೂ. ಆಗಿದ್ದರೆ, ಒಟ್ಟು ಖರ್ಚು 1,111.94 ಕೋಟಿ ರೂ. ಆಗಿದೆ.

ಖರ್ಚಿನ ವಿವರ:

ಬಿಜೆಪಿ ಚುನಾವಣೆಗೆ ಖರ್ಚು ಮಾಡಿದ 3,335 ಕೋಟಿ ರೂಪಾಯಿಗಳಲ್ಲಿ ಸಿಂಹಪಾಲು ಜಾಹೀರಾತು ಮತ್ತು ಪ್ರಚಾರಕ್ಕೆ ಹೋಗಿದೆ.

  • ಜಾಹೀರಾತು: 897.42 ಕೋಟಿ ರೂ.
  • ಹೆಲಿಕಾಪ್ಟರ್/ವಿಮಾನ: ನಾಯಕರ ಪ್ರಚಾರದ ಪ್ರಯಾಣಕ್ಕಾಗಿ 583.08 ಕೋಟಿ ರೂ.
  • ಅಭ್ಯರ್ಥಿಗಳಿಗೆ ನೆರವು: ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯವಾಗಿ 312.90 ಕೋಟಿ ರೂ.
  • ಸಿಬ್ಬಂದಿ ಸಂಬಳ: 69.07 ಕೋಟಿ ರೂ.

ಇತರೆ ಪಕ್ಷಗಳ ಸ್ಥಿತಿಗತಿ:

ಇದೇ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ವೈಎಸ್‌ಆರ್ ಕಾಂಗ್ರೆಸ್, ಟಿಡಿಪಿ ಮತ್ತು ಬಿಜು ಜನತಾದಳ (ಬಿಜೆಡಿ) ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಟಿಎಂಸಿ ದೇಣಿಗೆ 646 ಕೋಟಿ ರೂ.ನಿಂದ 184 ಕೋಟಿ ರೂ.ಗೆ ಕುಸಿದಿದೆ. ಜೆಡಿಯು ಮತ್ತು ಸಮಾಜವಾದಿ ಪಕ್ಷಗಳ ದೇಣಿಗೆಯಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವೆಂದರೆ, ಸಿಪಿಐ(ಎಂಎಲ್)ಎಲ್ ಪಕ್ಷದ ದೇಣಿಗೆ ಏರಿಕೆಯಾಗಿದ್ದು, ಖ್ಯಾತ ಲೇಖಕಿ ಅರುಂಧತಿ ರಾಯ್ ಕೂಡ ಪಕ್ಷಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

You cannot copy content of this page

Exit mobile version