ಬೇಲೂರು : ತಾಲೂಕಿನ ಆಲ್ದೂರು ಸಮೀಪದ ಪುರ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವನ್ನಪಿದೆ. ಬೇಲೂರಿನ ಸಮೀಪ ಬೀಟಮ್ಮ ಎಂಬ ಕಾಡಾನೆಗಳ ತಂಡದಿಂದ ಬೇರ್ಪಟ್ಟು ಆಲ್ದೂರು ಸುತ್ತಮುತ್ತ ಕಳೆದ ಕೆಲದಿನಗಳಿಂದ ೨೩ ಆನೆಗಳು ಬೀಡು ಬಿಟ್ಟಿದ್ದವು.
ಅರಣ್ಯ ಇಲಾಖೆ ಆನೆಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿತ್ತ ಆದರೆ, ಶನಿವಾರ ಮದ್ಯಾಹ್ನ NR ಪುರ ಸಮೀಪದ ಚಂದ್ರೇಗೌಡ ಎಂಬುವರ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಜೋತು ಬಿದ್ದ ಪರಿಣಾಮ ಇದೇ ಮಾರ್ಗದಲ್ಲಿ ಸಾಗಿದ ಕಾಡಾನೆಗೆ ಸ್ಪರ್ಶಿಸಿ ಆನೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯಾಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಆನೆ ಸುತ್ತುವರಿದ ಕಾಡಾನೆ ಗುಂಪು
ಮೃತಪಟ್ಟ ಕಾಡಾನೆಗಳ ಸುತ್ತ ಉಳಿದ ಕಾಡಾನೆಗಳು ಗುಂಪು ಸುತ್ತುವರಿದಿದೆ. ಮೃತ ಆನೆಯಿಂದ ೧೦೦ ರಿಂದ ೨೦೦ ಮೀಟರ್ ದೂರದಲ್ಲಿಯೇ ಆನೆಗಳ ಗುಂಪು ಇರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳುವುದು ಅಸಾದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಆನೆಯ ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.