ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಅಥವಾ ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಕಡ್ಡಾಯವಾಗಿ ಹಿಂದಿಯಲ್ಲಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.
ಕಳೆದ ತಿಂಗಳು 11 ನೇ ಸಂಪುಟದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯ ಪ್ರಕಾರ, ಇಂಗ್ಲಿಷ್ ಸಂಪೂರ್ಣವಾಗಿ ಅಗತ್ಯವಿರುವಲ್ಲಿ ಮಾತ್ರ ಬೋಧನಾ ಮಾಧ್ಯಮವಾಗಿರಬೇಕು ಮತ್ತು ಆ ಸಂಸ್ಥೆಗಳಲ್ಲಿ ಕ್ರಮೇಣ ಇಂಗ್ಲಿಷ್ ನಿಂದ ಹಿಂದಿಗೆ ಪರಿವರ್ತಿಸಿಕೊಳ್ಳಬೇಕು ಎಂದು ಹೇಳುತ್ತದೆ. “ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನೆ ಮತ್ತು ಇತರ ಚಟುವಟಿಕೆಗಳ ಮಾಧ್ಯಮವಾಗಿ ಬಳಸಬೇಕು ಮತ್ತು ಇಂಗ್ಲಿಷ್ ಅನ್ನು ಐಚ್ಛಿಕವಾಗಿ ಮಾಡಬೇಕು” ಎಂದು ಸಮಿತಿ ಶಿಫಾರಸು ಮಾಡಿದೆ.
ವಿಶ್ವವಿದ್ಯಾಲಯಗಳು, ತಾಂತ್ರಿಕ ಅಥವಾ ತಾಂತ್ರಿಕೇತರ ಮತ್ತು ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮ ಹಿಂದಿಯಾಗದ ಹೊರತು ಹಿಂದಿ ಒಂದು ಸಾಮಾನ್ಯ ಭಾಷೆಯಾಗಲು ಸಾಧ್ಯವಿಲ್ಲ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.
ಸಮಿತಿಯನ್ನು 1976 ರಲ್ಲಿ ಅಧಿಕೃತ ಭಾಷಾ ಕಾಯಿದೆ, 1963 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯು ಸಂಸತ್ತಿನ 30 ಸದಸ್ಯರನ್ನು ಒಳಗೊಂಡಿದೆ. ಲೋಕಸಭೆಯಿಂದ 20 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಹೊಂದಿದೆ. ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಆ ಆಧಾರದ ಮೇಲೆ ವರದಿಯನ್ನು ಸಿದ್ದಪಡಿಸಿ ಶಿಫಾರಸುಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಬೋಧನೆ, ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಆಂಗ್ಲ ಭಾಷೆ ಪ್ರಶ್ನೆಪತ್ರಿಕೆಯನ್ನು ತೆಗೆದು ಹಿಂದಿ ಸೇರಿಸಬೇಕು. ಹಿಂದಿಯಲ್ಲಿ ಕೆಲಸ ಮಾಡದ ಅಧಿಕಾರಿಗಳು ಮತ್ತು ನೌಕರರಿಗೆ ಎಚ್ಚರಿಕೆ ನೀಡುವುದು ಮತ್ತು ಉಚ್ಚ ನ್ಯಾಯಾಲಯದ ಹಿಂದಿಭಾಷೆ. ಇನ್ನಿತರೆ 112 ಶಿಫಾರಸುಗಳನು ಈ ಸಮೀತಿ ಮಾಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿವೆ. ಇನ್ನು ಕೇಂದ್ರೀಯ ವಿದ್ಯಾಲಯಗಳು (ಕೆವಿಗಳು), ನವೋದಯ ವಿದ್ಯಾಲಯಗಳು (ಎನ್‌ವಿಗಳು) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳು ಕೇಂದ್ರದ ತಾಂತ್ರಿಕೇತರ ಸಂಸ್ಥೆಗಳಾಗಿವೆ.
ದಕ್ಷಿಣ ಭಾರತವಲ್ಲದೇ ಉತ್ತರ ಭಾರತದಲ್ಲೂ ಹಿಂದಿ ವಿರೋಧಿ ಅಲೆ ಇದೆ. ಸ್ಥಳೀಯ ಭಾಷೆಗಳಿಗೆ ಮನ್ನಣೆ ನೀಡಿ. ಹಿಂದಿ ಹೇರಬೇಡಿ, ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂಬ ಕೂಗು ಕೇಳಿಬಂದಾಗಲೆಲ್ಲ ನಯವಾಗಿ ಪಾರಾಗುವ ಬಿಜೆಪಿಗರ ನೈಜ್ಯ ಮುಖವಾಡ ಈಗ ಬಯಲಾಗಿದೆ. ಇತ್ತ ಮೋದಿಯವರು ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ದೇಶಾದ್ಯಾಂತ ಗೌರವಿಸಲಾವುದು ಎಂಬ ಟ್ವೀಟ್ ಮಾಡಿ ದಕ್ಷಿಣದವರ ಮೂಗಿನ ಮೇಲೆ ತುಪ್ಪ ಸವರಿದರೆ. ಇತ್ತ ಅಮಿತ್ ಶಾ ಸಮೀತಿ ದೇಶಾದ್ಯಂತಾ ಹಿಂದಿ ಪ್ರಮೂಖ ಭಾಷೆಯನ್ನಾಗಿಸಲು ಮುಂದಾಗಿದ್ದಾರೆ.