ದೆಹಲಿ: ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ನೌಕರರೇ ಸ್ವತಃ ರಚಿಸಲು ಮತ್ತು ಸಕ್ರಿಯಗೊಳಿಸಲು ಅನುವು ಮಾಡಿಕೊಡುವ ಹೊಸ ವಿಧಾನವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪರಿಚಯಿಸಿದೆ. ಆಗಸ್ಟ್ 1ರಿಂದ ಇದು ಜಾರಿಗೆ ಬಂದಿದೆ.
ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ನೌಕರರು ತಮ್ಮ ಉದ್ಯೋಗದಾತರನ್ನು ಅವಲಂಬಿಸದೆ, ನೇರವಾಗಿ ಉಮಂಗ್ (UMANG) ಅಪ್ಲಿಕೇಶನ್ ಮೂಲಕ ಆಧಾರ್ ಆಧಾರಿತ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನವನ್ನು ಬಳಸಿ ಯುಎಎನ್ ಅನ್ನು ರಚಿಸಬಹುದು. ಉದ್ಯೋಗದಾತರ ಮೂಲಕ ಯುಎಎನ್ ರಚಿಸುವ ಸಾಂಪ್ರದಾಯಿಕ ವಿಧಾನವು ಅಂತರರಾಷ್ಟ್ರೀಯ ಕಾರ್ಮಿಕರು, ನೇಪಾಳ ಮತ್ತು ಭೂತಾನ್ ಪ್ರಜೆಗಳಿಗೆ ಮಾತ್ರ ಮುಂದುವರಿಯುತ್ತದೆ ಎಂದು ಇಪಿಎಫ್‌ಒ ತಿಳಿಸಿದೆ.
ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್‌ಒ ಮೂರು ಸೇವೆಗಳನ್ನು ಲಭ್ಯವಾಗಿಸಿದೆ: ಯುಎಎನ್ ಇಲ್ಲದ ಉದ್ಯೋಗಿಗಳಿಗೆ ಯುಎಎನ್ ಹಂಚಿಕೆ ಮತ್ತು ಸಕ್ರಿಯಗೊಳಿಸುವ ಸೇವೆಗಳು ಇದರಲ್ಲಿ ಸೇರಿವೆ.