ಬೆಂಗಳೂರು: ಎಂದಿನಂತೆ ಓಲಾ, ಉಬರ್, ರ‍್ಯಾಪಿಡೋ ಆಟೋಗಳ ಸಂಚಾರವಿದ್ದು ಸಾರಿಗೆ ಇಲಾಖೆ ಆಯುಕ್ತ ಆದೇಶಕ್ಕೂ ಈ ಕಂಪನಿಗಳು ಡೋಂಟ್ಕೇರ್ ಎಂದಿವೆ.
ಓಲಾ, ಊಬರ್ ಕಂಪನಿಗಳು ಸರ್ಕಾರದ ನಿಯಮ ಉಲ್ಲಂಘನೆ ಮಾಡುತ್ತಾ ಗ್ರಾಹಕರ ಬಳಿ ಹೆಚ್ಚಿನ ಚಾರ್ಚ್ ಮಾಡಿ ಹಣ ವಸೂಲಿ ಮಾಡುತ್ತಿವೆ ಎನ್ನುವ ಆರೋಪದಲ್ಲಿ ನಿನ್ನೆ ಸಾರಿಗೆ ಇಲಾಖೆ ಆಯುಕ್ತ ಸಭೆ ನಡೆಸಿದ್ದರು.
ಈ ಸಭೆಯ ನಿರ್ಣಯದಂತೆ ನಿನ್ನೆ ರಾತ್ರಿ 12 ರಿಂದ ಓಲಾ, ಊಬರ್ ಆ್ಯಪ್ ನಲ್ಲಿ ಆಟೋ ಸೇವೆ ಬಂದ್ ಎಂದು ಸಾರಿಗೆ ಇಲಾಖೆ ಆಯುಕ್ತ ಟಿಹೆಚ್‌ಎಂ ಕುಮಾರ್ ಮಾಹಿತಿ ನೀಡಿದ್ದರು.
ಆದ್ರೆ ಇಂದು ಕೂಡ ಎಂದಿನಂತೆ ಓಲಾ, ಉಬರ್, ಪಿಡೋ ಆಟೋಗಳ ಸಂಚಾರವಿದ್ದು ಸರ್ಕಾರದ ಆದೇಶಕ್ಕೆ ಕಂಪನಿಗಳು ಡೋಂಟ್ಕೇರ್ ಎಂದಿವೆ.