ರಾಷ್ಟ್ರಕವಿ ಕುವೆಂಪುರವರು ಹುಟ್ಟಿದ ನಾಡಿನಲ್ಲಿ ಜಾತಿ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ/ಗಣತಿ ಸಂದರ್ಭದಲ್ಲಿ ಕುವೆಂಪು ವಿಚಾರದಾರೆಗಳನ್ನು ಒಪ್ಪುವ ನಾವೆಲ್ಲರು ವಿಶೇಷವಾಗಿ ಮಲೆನಾಡು ಭಾಗದ ಜನರು ಜಾತಿ ಕಾಲಂನಲ್ಲಿ “ವಿಶ್ವಮಾನವ ಅಥವಾ ಮನುಜಮತ” ಎಂದು ನಮೂದಿಸುವ ಮೂಲಕ ಕುವೆಂಪು ಪರಂಪರೆಯನ್ನು ಉಳಿಸಿ ಕಾಪಾಡಬೇಕು ಎಂದು ವಿಚಾರವಾದಿ ಚಿಂತಕ ನಿಶ್ಚಲ್ ಜಾದೂಗಾರ್‌ರವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ರಾಜ್ಯದ, ದೇಶದ ಎಲ್ಲಾ ಧರ್ಮಗಳು ಅದರಲ್ಲೂ ಹಿಂದೂ ಧರ್ಮದ ಉಪಜಾತಿಗಳಲ್ಲಿ “ಜಾತಿವ್ಯಾದಿ” ಹಾಗೂ ಅಂಧಾಭಿಮಾನ ಹೆಚ್ಚಾಗುತ್ತಿದೆ. ಜಾತಿ ಧರ್ಮಗಳ ಸ್ಥಾಪನೆಯ ವಿಭಜನೆಯ ಮೂಲ ಸ್ವರೂಪವನ್ನು, ದಾರ್ಶನಿಕರ, ಬಸವಾದಿ ಶರಣರ ಮೂಲ ಆಶಯವನ್ನು ಸಂಪೂರ್ಣವಾಗಿ ಮರೆತು ಜಾತಿ-ಜಾತಿಗಳ ನಡುವೆ ದೊಡ್ಡ ಕಂದಕವನ್ನು ಕೆಲ ಪ್ರಬಲ ರಾಜಕಾರಣಿಗಳು, ಸ್ವಾಮೀಜಿಗಳು ತಮ್ಮ ವೈಯಕ್ತಿಕ ಉದ್ದೇಶ ಸ್ಥಾಪನೆಗಾಗಿ ಒಂದು ರೀತಿಯ ಸ್ವಜನ ಹಿತಾಶಕ್ತಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಸರಿ ಸಮಾಜದ ಕುರಿತು ಚಿಂತಿಸುವ ಕುವೆಂಪು, ಅನಂತಮೂರ್ತಿ, ತೇಜಸ್ವಿ, ಕಡಿದಾಳು ಶಾಮಣ್ಣ ನಾಡಿನವರಾದ ನಾವಾದರೂ ಈ ವರ್ತುಲ ಹರಡಲು ಬಿಡಬಾರದು. ಮನುಜ ಮತ ಮತ್ತು ವಿಶ್ವಮಾನವ ಎಂಬ ಪರಿಕಲ್ಪನೆಯು ಚಳುವಳಿಯ ರೂಪವಾಗಬೇಕಾಗಿದೆ” ಎಂದು ನಿಶ್ಚಲ್ ಜಾದೂಗಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕುವೆಂಪು ಹೆಸರಿನಲ್ಲಿ ಹೆಸರು, ವಿದ್ವಾಂಸಕತೆ, ಡಾಕ್ಟರೇಟ್ ಪಡೆದಿರುವ ಅನೇಕ ಪ್ರೊಫೆಸರ್‌ಗಳೇ ಇಂದು ತಮ್ಮ ತಮ್ಮ ಜಾತಿಯ ಸಮಾವೇಶದಲ್ಲಿ ‘ಅಲ್ಪ ಜ್ಞಾನಿಗಳಂತೆ “ಜಾತಿ ಸಂಘಟಣೆ ಮಾಡೋಣ ಬನ್ನಿ” ಎಂಬ ಕರೆ ನೀಡುತ್ತಿರುವ ಇಂಥಹಾ ಜಾತಿ ಸೀಮಿತ ಡಾಕ್ಟರೇಟ್, ಪ್ರೊಫೆಸರ್‌ಗಳಿಗೆ ನಾಚಿಕೆಯಾಗಬೇಕು. ಇದು ಇವರ ಭೌಧಿಕ ದಿವಾಳಿತನಕ್ಕೆ ಸಾಕ್ಷಿಯಾಗುವಂತಿದೆ. ರಾಷ್ಟ್ರಕವಿ ಕುವೆಂಪುರವರ “ಹೊಸನಾಡು ಕಟ್ಟೊಣಬನ್ನಿ” ಎಂಬ ಧ್ಯೇಯ ವಾಕ್ಯಕ್ಕೆ ಇಂತಹ ಕೆಲವಾರು ಯೂನಿವರ್ಸಿಟಿ “ಡಬ್ಬಾ “
ಪ್ರೊಫೆಸರ್‌ಗಳು ‘ನಮ್ಮ ಜಾತಿಯನ್ನು ಕಟ್ಟೊಣ ಬನ್ನಿ ‘ಎಂದು ಹೇಳುತ್ತಿರುವುದರ ಬಗ್ಗೆ ‘ಕುವೆಂಪು ನಾಡಿನವರಾದ’ ನಾವು ಮತ್ತೆ ಮತ್ತೆ ಚರ್ಚಿಸಿ ಆಂದೋಲನವನ್ನು ರೂಪಿಸುವ ಸಂದರ್ಭವಾಗಿದೆ” ಎಂದು ನಿಶ್ಚಲ್ ಆಗ್ರಹಿಸಿದ್ದಾರೆ.
“ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು ಆರ್ ಅನಂತಮೂರ್ತಿ, ರೈತ ಹೋರಾಟಗಾರ ‘ಕಡಿದಾಳು ಶಾಮಣ್ಣ ‘ಅನುಯಾಯಿಗಳು, ಬುದ್ದಿಜೀವಿಗಳು, ಬರಹಗಾರರು, ಚಿಂತಕರೊಂದಿಗೆ ಸರ್ಕಾರ ಚರ್ಚಿಸಿ, ‘ವಿಶ್ವಮಾನವ ಅಥವಾ ಮನುಜಮತ’ ಎಂಬ ಜಾತಿ ವಿನಾಶದ ಕಾಲಂ ಸೃಷ್ಟಿಸಬೇಕು ಎಂದು ಆಗ್ರಹಿಸುತ್ತೇವೆ” ಎಂದು ನಿಶ್ಚಲ್ ಆಗ್ರಹಿಸಿದ್ದಾರೆ.