ಹಾಸನ : ಸಂವಿಧಾನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದು, ಇನ್ನು ಮಹಿಳೆಯರು ಕೂಡ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಾನಮಾನಗಳಿಸಬಹುದು ಎಂಬುದಕ್ಕೆ ನಾವೇ ಉದಾಹರಣೆಯಾಗಿದ್ದು, ನಮ್ಮ ಸ್ಥಾನಮಾನಗಳು ಕೂಡ ಸಂವಿಧಾನದ ಕೊಡುಗೆಯ ಫಲವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಆರ್ ಪೂರ್ಣಿಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ೬೮ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಆಗಲಿ ಅವರ ಪ್ರತಿಯೊಂದು ಹೆಜ್ಜೆಯಲ್ಲಿಯೂ ಇರುತ್ತದೆ. ನಾವು ಇಲ್ಲಿ ನಿಂತಿದ್ದೇವೆ ಎಂದರೆ ಅವರು ನೀಡಿದ ಸಂವಿಧಾನ. ಪ್ರತಿದಿನ ಅವರ ನೆನಪು ನಮ್ಮ ಮನಸ್ಸಿನಲ್ಲಿ ಕಣ್ಮುಂದೆ ಇರಬೇಕು. ದೀನ ದಲಿತರು ಸಹೋದರರು ಕೆಳಮಟ್ಟದಲ್ಲಿ ಇದ್ದರೂ ಅವರಿಗೆ ನ್ಯಾಯ ಒದಗಿಸಿದಂತಹ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ಅವರ ಪ್ರತಿರೂಪವಾಗಿ ಸಮಾಜಮುಖಿಯಾಗಿ ನಿಂತಿದ್ದರು ಅವರಿಗೆ ಎಲ್ಲಾ ಯಶಸ್ಸು ಅಂಬೇಡ್ಕರ್ ಸಲ್ಲುತ್ತದೆ. ಅವರ ಆಶಯವನ್ನು ಈಡೇರಿಸಬೇಕು ನಮ್ಮ ಕೃತಜ್ಞತೆಗಳನ್ನು ತಿಳಿಸಬೇಕು ಅವರ ಆಶಯ ದೀನದಲಿತರನ್ನು ಮುಂದೆ ತರುವಂತಹದ್ದು ನಮ್ಮ ಭಾರತವನ್ನು ಅತ್ಯಂತ ಬಲಿಷ್ಟವಾಗಿ ರಾಷ್ಟ್ರವಾಗಿ ಮುನ್ನಡೆಸುವುದೇ ನಮ್ಮ ಕರ್ತವ್ಯ ಆಗಿಯೇ ಅವರ ಆಶಯವನ್ನು ಈಡೇರಿಸುವ ಹಾಗೆ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತ ಅವರು ಮಾತನಾಡಿ, ಯಾವುದೇ ಸಮುದಾಯ ಅಥವಾ ಹೆಣ್ಣು ಮಕ್ಕಳು ಕೂಡ ಇಂತಹ ದೊಡ್ಡ ಹುದ್ದೆಯನ್ನಾದರೂ ಅಲಂಕರಿಸಬಹುದು ಎಂಬುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಸಾಕ್ಷಿಯಾಗಿದೆ. ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿರುವ ಅವರ ತತ್ವಗಳನ್ನು ಎಲ್ಲರೂ ಅಳವಾಡಿಕೊಳ್ಳಬೇಕು ಜೊತೆಗೆ ಅದನ್ನು ಆಚರಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಆಗಬೇಕಿದೆ ಎಲ್ಲರೂ ಒಂದೇ ಎಂಬುದನ್ನು ಸಂವಿಧಾನದಲ್ಲಿ ತಿಳಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಲಾ ಅವರು ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ತಮ್ಮ ವ್ಯಕ್ತಿತ್ವದಿಂದ ಇಡೀ ದೇಶವನ್ನು ಬದಲಾಯಿಸಿದ್ದಾರೆ ಎಂದರೆ ಈ ವ್ಯಕ್ತಿ ಮುಂಚೂಣಿಯಲ್ಲಿದ್ದಾರೆ. ಆದರಿಂದ ಇವತ್ತು ಎಲ್ಲರೂ ಸಮನಾಗಿ ಸಂಭ್ರಮಿಸುತ್ತಿದ್ದೇವೆ. ಆ ವ್ಯಕ್ತಿ ಇಲ್ಲದೆ ಇರುವಾಗ ನೆನಪಿಸಿಕೊಳ್ಳುತ್ತೇವೆ. ಅವರ ಕೃತಿ ಅವರ ಕಾರ್ಯ ಅವರು ಮಾಡಿರುವಂತಹ ಕೆಲಸ ಹೆಣ್ಣು ಮಕ್ಕಳು ಹೆಚ್ಚಾಗಿ ಅವರು ಬರೆದಿರುವಂತಹ ಪುಸ್ತಕಗಳನ್ನು ಓದಿ ಹೆಣ್ಣು ಮಕ್ಕಳಿಗೂ ಸಮಾನವಾಗಿ ಮುಂದೆ ಯಾವ ರೀತಿಯಲ್ಲಿ ಮುಂದೆ ಬರುತ್ತಾರೆ ಎಂಬುದನ್ನು ತಿಳಿಸಿರುತ್ತಾರೆ. ದಯವಿಟ್ಟು ನಿಮ್ಮ ಮನಸ್ಸಿನಲ್ಲಿ ಕೆಲಸ ಕಾರ್ಯಗಳಲ್ಲಿ ಎಲ್ಲರೂ ತೋರಿಸಬೇಕು ನಮಗೆ ಕೊಟ್ಟಿರುವಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಕೊಟ್ಟಿರುವಂತಹ ಸಮಾನದ ಸಂವಿಧಾನ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಪೀರ್, ನಾಗರಾಜು ಹೆತ್ತೂರ್, ಪ್ರಕಾಶ್, ಕೃಷ್ಣದಾಸ್, ಹೆಚ್.ಕೆ. ಸಂದೇಶ್ ಹಾಗೂ ದಲಿತ ಮತ್ತು ಬೌದ್ಧ ಧರ್ಮದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.