ಚನ್ನರಾಯಪಟ್ಟಣ : ಶ್ರೀ ಆದಿಚುಂಚನಗಿರಿ ಪದವಿ ಕಾಲೇಜಿನಲ್ಲಿ, ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಆಯೋಜಿಸಿದ್ದ, ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿ, ಕಾನೂನಿಗೆ ಎಲ್ಲರೂ ತಲೆಬಾಗಬೇಕು. ಕಾನೂನಿ ನ ಮುಂದೆ ಎಲ್ಲರೂ ಸಮಾನರು, ಸಂವಿಧಾನ ಅಂಗೀಕಾರವಾದ ದಿನದ ಮಹತ್ವ, ಅರಿತು ಸಂವಿಧಾನವನ್ನ ಓದುವ ಕಾರ್ಯ ಮಾಡಬೇಕು, ಸಂವಿಧಾನ ಕಾನೂನಿನ ಮೂಲ ಬೇರಾಗಿದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ ಕುಸುಮ ಅವರು ಅತಿಥಿ ಸ್ಥಾನದಿಂದ ಮಾತನಾಡಿ, 2015 ರಿಂದ ಸಂವಿಧಾನ ದಿನ ಆಚರಣೆಯಾಗುತ್ತಿದೆ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸ್ಮರಣೆಯಲ್ಲಿ ಈ ಕಾರ್ಯಕ್ರಮ ಆಚರಣೆಯಾಗುತ್ತಿದ್ದು, ಸಂವಿಧಾನದ ಅರಿವು ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಡಿಕೆ ಹರೀಶ್, ಕಾರ್ಯದರ್ಶಿ ಹೇಮಂತ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಂ ಕೆ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ದೇಶದ ಉಸಿರು ಹಾಗೂ ಆತ್ಮವಾಗಿದೆ, ಸಂವಿಧಾನದ ಆಶಯಗಳನ್ನ ಪಾಲನೆ ಮಾಡಬೇಕು, ಎಂದರು.ಬಿಎಡ್ ಕಾಲೇಜಿನ ಸಹಪ್ರಾಧ್ಯಾಪಕ, ಲಕ್ಷ್ಮಿಕಾಂತ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಎನ್ ಟಿ ನಾಗರಾಜು, ಶಹ ಪ್ರಾಧ್ಯಾಪಕ ಸಿದ್ದರಾಜು, ನ್ಯಾಯಾಲಯದ ಸಿಬ್ಬಂದಿ ಭಗವಾನ್ ಇದ್ದರು. ವಿದ್ಯಾರ್ಥಿಗಳು ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ, ಭಾರತದ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಕಾಲೇಜಿನ ವಿಕಲಾಂಗ ಚೇತನ, ವಿದ್ಯಾರ್ಥಿ ಪ್ರಜ್ವಲ್ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಗೀತ ಗಾಯನ ಮಾಡಿದ್ದು ವಿಶೇಷತೆಯಿಂದ ಕೂಡಿತ್ತು.
