ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾಗುವ ಗುಂಡಿನ ದಾಳಿಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಹರಡಿರುವ ಸುದ್ದಿಗಳ ಪ್ರಕಾರ ‘ಸನ್ಸ್ ಆಫ್ ಅಬು ಜಂಡಾಲ್’ ಎನ್ನುವ ಸಂಘಟನೆಯು ಪ್ಯಾಲೇಸ್ತೀನ್ ಅಧ್ಯಕ್ಷರು ಇಸ್ರೇಲ್ ಜೊತೆ ಕೈ ಜೋಡಿಸಿ ದೇಶಕ್ಕೆ ದ್ರೋಹ ಬಗೆದ ಕಾರಣ ತಾನು ಈ ದಾಳಿ ಎಸಗಿರುವುದಾಗಿ ಹೇಳಿಕೊಂಡಿದೆ.
ಆದರೆ DD Geopolitics ಎನ್ನುವ ಸುದ್ದಿ ಸಂಸ್ಥೆಯು ಈ ಸುದ್ದಿಯ ಸತ್ಯ ಪರಿಶೀಲನೆ ನಡೆಸಿದ್ದು, ಇದೊಂದು ಇಸ್ರೇಲ್ ಹರಡಿರುವ ಸುಳ್ಳು ಸುದ್ದಿ ಎಂದು ಅದು ಹೇಳಿದೆ.
DD Geopolitics ತನ್ನ Twitter (X) ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಅದರಲ್ಲಿ “ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಕಾರಿನ ಮೇಲೆ ನಡೆದ ದಾಳಿಯದು ಎನ್ನಲಾಗುವ ವಿಡಿಯೋಗಳು ಓಡಾಡುತ್ತಿದ್ದು, ಅವು ನಕಲಿ ವಿಡಿಯೋಗಳಾಗಿವೆ. ಆ ದಿನ ಅಧ್ಯಕ್ಷರು ಮನೆಯಿಂದ ಹೊರಗೆ ಬಂದಿರಲೇ ಇಲ್ಲ” ಎಂದು ಹೇಳಿದೆ.
ಇದೊಂದು ಇಸ್ರೇಲ್ ಗುಪ್ತಚರ ದಳವು ಫೆಲೆಸ್ತೀನಿಯರ ನಡುವೆ ಜಗಳ ತಂದು ಹಾಕಲು ನಡೆಸಿರುವ ಸಂಚಾಗಿದ್ದು, ಇದನ್ನು ಇಸ್ರೇಲ್ ಯುದ್ಧ ತಂತ್ರದ ಭಾಗವಾಗಿ ಮಾಡಿದೆ ಎಂದು ಅದು ಹೇಳಿದೆ.
ಈಗಾಗಲೇ ಈ ಕುರಿತು ಫ್ಯಾಲೇಸ್ತೀನಿ ಪ್ರಾಧಿಕಾರಗಳು ಪ್ರಕಟಣೆ ಹೊರಡಿಸಿದ್ದು ಅವು ಫೇಕ್ ವಿಡೀಯೋ ಎಂದು ದೃಢಪಡಿಸಿವೆ.
ಮೂಲತಃ ಆ ವಿಡೀಯೋ ಒಂದು ಡ್ರಗ್ಸ್ ಜಾಲದೊಂದಿಗೆ ನಡೆದ ಮುಖಾಮುಖಿಗೆ ಸಂಬಂಧಿಸಿದ್ದು, ಜಲಜಾನ್‌ನಲ್ಲಿ ಎನ್ನುವಲ್ಲಿ ಈ ಗುಂಡಿನ ಚಕಮಕಿ ನಡೆದಿತ್ತು ಎಂದು DD Geopolitics ಹೇಳಿದೆ.
ಇಸ್ರೇಲ್ ಜಿಯೋನಿಸ್ಟ್ ವಾದಿಗಳ ಮೊಸಾದ್ ತಂಡವು ಪ್ಯಾಲೇಸ್ತೀನ್ ಒಳಗೆ ಅಂತರ್ಯುದ್ಧ ಸೃಷ್ಟಿಸುವ ಸಲುವಾಗಿ ಇಂತಹ ಹಲವು ವಿಡೀಯೋಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇಂದು ಜಾಗತಿಕವಾಗಿ ಜಿಯೋನಿಸಂ ಎನ್ನುವುದು ಆದುನಿಕ ಫ್ಯಾಸಿಸಂ ಎಂದು ಅದು ಹೇಳಿದೆ.