ಹಾಸನ : ಪಡೆದ ಸಾಲಕ್ಕೆ ರೈತರ ಜಮೀನು ಹರಾಜಿಗೆ ಇಟ್ಟಿದಲ್ಲದೇ ಕೇಳಲು ಹೋದ ಮಾಲೀಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ನೂಕಿ ಕೈ ಮುರಿದಿರುವುದನ್ನು ಖಂಡಿಸಿ ರೈತ ಸಂಘದಿಂದ ಕೆ.ಆರ್. ಪುರಂ ಬಳಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ರಸ್ತೆ ತಡೆ ಮಾಡಿದಲ್ಲದೇ ಬ್ಯಾಂಕ್ ಮುಖ್ಯ ಬಾಗಿಲಿಗೆ ಬೀಗ ಹಾಕಲು ಮುಂದಾದ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.
ಇದೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 15 ದಿನಗಳ ಹಿಂದೆ ಊರಿಗೆ ಹೋಗಿ ತಮಟೆ ಹೊಡೆದು ಮೃತರಾಗಿರುವ ಶಾಂತೇಗೌಡರ ಪುತ್ರ ಶಿವಕುಮಾರ್ ಅವರ ಸಾಲದ ಜಮೀನು ಹರಾಜು ಹಾಕಲು ಬ್ಯಾಂಕಿನ ಮ್ಯಾನೆಜರ್ ಹೊರಟಿದ್ದರು. ಜಮೀನು ಇದೆ ಹರಾಜು ಹಾಕುತ್ತೇವೆ ಯಾರಾದರೂ ಖರೀದಿ ಮಾಡಬಹದು ಎಂದಿದ್ದಾರೆ. ನಮಗೆ ನೋಟಿಸ್ ಕೊಟ್ಟಿಲ್ಲ. ಏಕೆ ಹರಾಜು ಹಾಕುತ್ತಿದ್ದೀರಿ ಎಂದು ಜಮೀನು ಮಾಲೀಕರು ಬ್ಯಾಂಕಿನವರಿಗೆ ಕೇಳಿದ್ದು, ಇದು ಕೋರ್ಟ್ ಆದೇಶ ಎಂದಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರೂ ಕೈ ಮಿಲಾಯಿಸಿದ್ದಾರೆ. ಈ ವೇಳೆ ಬ್ಯಾಂಕಿನವರು ಸಾಲ ಪಡೆದವನನ್ನು ನೂಕಿದಾಗ ಚರಂಡಿಗೆ ಹೋಗಿ ಬಿದ್ದಿದ್ದಾರೆ.
ಈ ವೇಳೆ ಶಿವಕುಮಾರ್ ಅವರ ಕೈ ಮುರಿದು ಹೋಗಿದೆ ಎಂದು ದೂರಿದರು. ಈ ಬಗ್ಗೆ ಬ್ಯಾಂಕಿನವರಿಂದ ವಿಚಾರಣೆ ಮಾಡಲು ರೈತ ಸಂಘದಿAದ ಬಂದಿದ್ದೇವೆ. ಈ ಗ್ರಾಮೀಣ ಬ್ಯಾಂಕ್ ಹಾಸನದಲ್ಲಿ ಬಾಲ ಬಿಚ್ಚುತ್ತಿದ್ದಾರೆ. ಕೇಂದ್ರ ಸರಕಾರದವರೇ ರೈತರ ಹಣ ಮುಟ್ಟಲು ಎದುರುತ್ತಿದ್ದಾರೆ. ರಾಜ್ಯ ಸರಕಾರದವರು ಹಣ ವಸೂಲಿ ಮಾಡಲು ಹೇಳಿರುವುದಾಗಿ ನೇರವಾಗಿ ಈ ಬ್ಯಾಂಕಿನವರು ಹೇಳುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಉತ್ತರ ಕೊಡಲಿ ನಾವು ಹೇಳುವುದಾಗಿ ತಿಳಿಸಿದರು.
ಈ ಬ್ಯಾಂಕಿನವರು ಪ್ರತಿಭಟನಗಾರರ ಬಳಿ ಬಂದು ಸಮಸ್ಯೆ ಆಲಿಸಿದರು. ಈ ಬ್ಯಾಂಕ್ ವಿಲೀನ ಆಗಿರುವುದರಿಂದ ಸದ್ಯಕ್ಕೆ ಹರಾಜು ಪ್ರಕ್ರಿಯೆ ನಡೆಸುವುದಿಲ್ಲ. ರೈತರಿಗೆ ಸ್ಪಂದಿಸುವ ರೀತಿ ನಡೆದುಕೊಳ್ಳುವುದಾಗ ಹೇಳುವ ಮೂಲಕ ರೈತರ ಪ್ರತಿಭಟನೆ ಶಾಂತಿಗೊಳಿಸಿದರು.ರೈತ ಸಂಘದ ಬಿಟ್ಟಗೌಡನಹಳ್ಳಿ ಮಂಜು, ಆಲದಹಳ್ಳಿ ಶಶಿಧರ್, ರಾಜಣ್ಣ, ಶಿವಕುಮಾರ್, ಶೋಮಶೇಖರ್, ಪಾಲಾಕ್ಷ, ಶಂಕ ಮಂಜಣ್ಣ, ಮನು ಇತರರು ಉಪಸ್ಥಿತರಿದ್ದರು.