ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದಲ್ಲಿ ಪಿಎಸ್‌ಎ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನವು ಆಕಾಶದಲ್ಲಿಯೇ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಗೆ ಅಪ್ಪಳಿಸಿತು.
ಅಪಘಾತದ ಸಮಯದಲ್ಲಿ ವಿಮಾನದಲ್ಲಿ 60 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ. ತೀವ್ರ ಪರಿಹಾರ ಕಾರ್ಯಗಳು ಮುಂದುವರೆದಿವೆ. ಕಾನ್ಸಾಸ್‌ನ ವಿಚಿಟಾ ನಗರದಿಂದ ವಾಷಿಂಗ್ಟನ್‌ಗೆ ಪ್ರಯಾಣಿಸುತ್ತಿದ್ದಾಗ ಈ ಮಾರಕ ಅಪಘಾತ ಸಂಭವಿಸಿದೆ.
ಗುರುವಾರ ವಾಷಿಂಗ್ಟನ್ ಬಳಿಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕ ವಿಮಾನವು ಯುಎಸ್ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ನದಿಗೆ ಪತನಗೊಂಡಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವಾರು ಸಂಸ್ಥೆಗಳು ಭಾಗಿಯಾಗಿದ್ದವು.
ಪೊಟೊಮ್ಯಾಕ್ ನದಿಯಿಂದ ಇಲ್ಲಿಯವರೆಗೆ ಹದಿನೆಂಟು ಶವಗಳನ್ನು ಹೊರತೆಗೆಯಲಾಗಿದೆ. ಕಾನ್ಸಾಸ್‌ನ ವಿಚಿಟಾದಿಂದ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ಜೆಟ್‌ನಲ್ಲಿ ಅರವತ್ತು ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಅಮೇರಿಕನ್ ಏರ್‌ಲೈನ್ಸ್ ತಿಳಿಸಿದೆ. ಈ ವಿಮಾನವನ್ನು ಪಿಎಸ್ಎ ಏರ್ಲೈನ್ಸ್ ನಿರ್ವಹಿಸುತ್ತಿತ್ತು.