ಹೃದಯಾಘಾತದಿಂದ ಸಾವು ಎಂದಿದ್ದ ಕುಟುಂಬದ ವಿರುದ್ಧ ಗ್ರಾಮಸ್ಥರು ಹತ್ಯೆ ಎಂದು ಆಪಾದಿಸಿದ್ದೇಕೆ?
ಅರೇಹಳ್ಳಿ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶಶಿಧರ(58 ವರ್ಷ) ಎಂಬುವವರನ್ನ ತನ್ನ ಹೆತ್ತ ಮಗನೆ ಹತ್ಯೆ ಮಾಡಿ ಬಲಿ ಪಡೆದಿದ್ದಾನೆ ಎಂದು ಮಗನ ವಿರುದ್ಧ ಸ್ವತಃ ಹೆತ್ತ ತಾಯಿ ಪೊಲೀಸರಿಗೆ ದೂರು ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಇಂದು ಸಂಜೆ ಸುಮಾರು 8 ಗಂಟೆಯ ಹೊತ್ತಿನಲ್ಲಿ ಶಶಿಧರ ಎಂಬುವವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಚಿಕಿತ್ಸೆಗಾಗಿ ಅರೇಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಪಾಸಣೆ ನಡೆಸಿದ ವೈಧ್ಯಾಧಿಕಾರಿ ಮರಣಹೊಂದಿರುವುದನ್ನು ದೃಢಪಡಿಸಿರುತ್ತಾರೆ ಇದಾದ ಬಳಿಕ ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸ್ವಗೃಹಕ್ಕೆ ತಂದಿರುತ್ತಾರೆ.
ಈ ವೇಳೆಗಾಗಲೆ ಹತ್ಯೆಯಾಗಿದೆ ಎನ್ನಲಾದ ಮನೆಯಲ್ಲಿ ಕೆಲ ಹೊತ್ತಿನ ಹಿಂದೆ ಜಗಳವಾಡುತ್ತಿರುವ ಶಬ್ದವನ್ನು ಆಲಿಸಿದ ಅಕ್ಕ ಪಕ್ಕದ ಮನೆಯವರು ಹಾಗು ಗ್ರಾಮದ ಮುಖಂ ಡರು ಜಮಾಯಿಸಿ ವಿಕೃತ ಮನಸ್ಸಿನ ಮಗನಿಂದಲೇ ಹತ್ಯೆಯಾಗಿರುವುದನ್ನು ಮರೆಮಾಚಿ ಹೃದಯಾ ಘಾತವಾಗಿ ಸಹಜ ಸಾವು ಆಗಿದೆ ಎಂದು ಯಾಕೆ ಸುಳ್ಳು ಹೇಳುತ್ತಿರುವಿರಿ? ಒಂದು ವೇಳೆ ಹತ್ಯೆಯನ್ನು ಸಹಜವಾಗಿ ಮರಣ ಹೊಂದಿದ್ದಾರೆ ಎಂದು ಸುಳ್ಳು ಹೇಳುವುದಾದರೆ ಅಂತ್ಯ ಸಂಸ್ಕಾರಕ್ಕಾಗಲೀ ಅಥವಾ ಇನ್ನೂ ಮುಂದೆ ನಿಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಗಳಿಗೆ ನಾವುಗಳು ಬಾಗಿಯಾಗುವುದಿಲ್ಲ ಎಂದು ಸಂಬಂಧಿಕರ ಬಳಿ ಆಕ್ರೋಶಗೊಂಡು ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಪತಿಯ ಮರಣದ ವಿಷಯ ತಿಳಿದ ಕ್ಷಣದಿಂದ ಕಣ್ಣೀರಿಟ್ಟು ನಿತ್ರಣಗೊಂಡಿದ್ದ ಪತ್ನಿಯು ಎಚ್ಚೆತ್ತು ಪತಿಯ ಸಾವಿನ ಮೊದಲು ಮನೆಯಲ್ಲಿ ಅಪ್ಪ ಮಗ ಜಗಳ ವಾಡುತ್ತಿದ್ದರು ಆಗ ನಾನು ಅವನಿಂದ ಬಿಡಿಸಿಕೊಂಡು ಸಹೋದರನ ಮನೆಗೆ ಓಡಿ ತಪ್ಪಿಸಿಕೊಂಡಿರು ವುದು ನಿಜ, ಇಂತಹ ಮಗನನ್ನು ಹೆತ್ತು ದಿನ ಜಗಳವಾಡುವುದು ಕಣ್ಣೀರಿಡುವುದು ಸಾಮಾನ್ಯವಾಗಿದೆ ,ಇವನನ್ನು ಹೀಗೆ ಬಿಟ್ಟರೆ ನನ್ನನ್ನು ಒಂದಲ್ಲ ಒಂದು ದಿನ ಸಾಯಿಸುತ್ತಾನೆ, ನೀವೇ ಸರಿಯಾದ ಬುದ್ದಿ ಕಲಿಸಿ ಎಂದು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀ ಸರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ, ನಂತರ ಪೂರಕ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲು ಮಾಡಿರುತ್ತಾರೆ
ಹತ್ಯೆ ಮಾಡಿದ್ದಾನೆ ಎನ್ನಲಾದ ಆಪಾದಿತ ದಿನೇಶ್(34ವರ್ಷ) ಎಂಬುವವರು ತುಂಬಾ ವರ್ಷಗಳಿಂದ ಮನೆಯಲ್ಲಿ ಮದ್ಯಪಾನ ಮಾಡಿ ನಿತ್ಯ ಅಪ್ಪ ಅಮ್ಮನೊಂದಿಗೆ ಜಗಳವಾಡುವುದು, ಸಿಕ್ಕ ಸಿಕ್ಕಲ್ಲಿ ಹೊಡೆಯುವುದು ಸಾಮಾನ್ಯವಾಗಿದೆ, ಈಗಾಗಲೇ ಬಹಳಷ್ಟು ಬಾರಿ ಸಾರ್ವಜನಿಕರು ಮನೆಯಲ್ಲಿ ಹೊಡೆದಾಟ ವಾಗುತ್ತಿದ್ದಾಗ ಬಿಡಿಸಿದ್ದು ಉಂಟು, ಅಪ್ಪ ಅಮ್ಮನಿಗೆ ಹೊಡೆದು ಗಾಯಗಳಾಗಿ ಆಸ್ಪತ್ರೆಯಲ್ಲಿ ಎಷ್ಟೋ ಬಾರಿ ಚಿಕಿತ್ಸೆಯನ್ನು ಸಹಾ ಪಡೆದುಕೊಂಡು ಇನ್ನಾ ದರೂ ಬದಲಾಗುತ್ತಾನೆ ಎಂದು ಸಹಿಸಿಕೊಂಡಿದ್ದು ಇದೀಗ ತನ್ನ ವಿಕೃತ ಮನಸ್ಥಿತಿಯನ್ನು ತೋರಿಸಿದ್ದಾನೆ,ಏನೇ ಆಗಲಿ ಜನುಮ ನೀಡುವ ತಂದೆ ತಾಯಿಗೆ ಹೊಡೆಯ ದಿರಲಿ ಹತ್ಯೆ ಮಾಡುವ ವರು ನಮ್ಮಲ್ಲಿ ಇದ್ದಾರಲ್ಲ ಇಂಥಹ ಮನಸ್ಥಿತಿ ಇನ್ನೂ ಮುಂದೆ ಯಾರಿಗೂ ಬರಬಾರದು, ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುವುದು ಗ್ರಾಮಸ್ಥರ ಅಭಿಪ್ರಾಯ