Home ಬ್ರೇಕಿಂಗ್ ಸುದ್ದಿ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾದೇವಿ ನಿಧನ

ಚಿತ್ರರಂಗದ ಹಿರಿಯ ನಟಿ ಬಿ ಸರೋಜಾದೇವಿ ನಿಧನ

0

ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ. 87 ವರ್ಷದ ಹಿರಿಯ ನಟಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. 6 ದಶಕಗಳ ಸುದೀರ್ಘ ಸಿನಿಮಾ ಬದುಕಿಗೆ ಇಂದು ವಿದಾಯ ಹೇಳಿದ್ದಾರೆ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ಅವರು ಏಳು ದಶಕಗಳಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿ ಸರೋಜಾದೇವಿ ಅವರನ್ನು ಕನ್ನಡದಲ್ಲಿ “ಅಭಿನಯ ಸರಸ್ವತಿ” ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತಿತ್ತು.

ಕಿತ್ತೂರುರಾಣಿ ಚೆನ್ನಮ್ಮ,
• ಅಮರಶಿಲ್ಪಿ ಜಕಣಾಚಾರಿ,
• ಕಥಾಸಾಗರ,
• ಬಬ್ರುವಾಹನ,
• ಭಾಗ್ಯವಂತರು,
• ಆಷಾಡಭೂತಿ,
• ಶ್ರೀರಾಮಪೂಜಾ,
• ಕಚ ದೇವಯಾನಿ,
• ರತ್ನಗಿರಿ ರಹಸ್ಯ,
• ಕೋಕಿಲವಾಣಿ,
• ಸ್ಕೂಲ್ಮಾಸ್ಟರ್,
• ಪಂಚರತ್ನ,
• ಲಕ್ಷ್ಮೀಸರಸ್ವತಿ,
• ಚಿಂತಾಮಣಿ,
• ಭೂಕೈಲಾಸ,
• ಅಣ್ಣತಂಗಿ,
• ಜಗಜ್ಯೋತಿ ಬಸವೇಶ್ವರ,
• ಕಿತ್ತೂರುಚೆನ್ನಮ್ಮ,
• ದೇವಸುಂದರಿ,
• ವಿಜಯನಗರದ ವೀರಪುತ್ರ,
• ಮಲ್ಲಮ್ಮನ ಪವಾಡ,
• ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
• ಪೂರ್ಣಿಮಾ,
• ಗೃಹಿಣಿ,
• ಪಾಪಪುಣ್ಯ,
• ಸಹಧರ್ಮಿಣಿ,
• ಶ್ರೀನಿವಾಸಕಲ್ಯಾಣ,
• ಚಾಮುಂಡೇಶ್ವರಿ ಮಹಿಮೆ,
• ಚಿರಂಜೀವಿ,
• ಶನಿಪ್ರಭಾವ ಸಿನೆಮಾಗಳು ಬಿ ಸರೋಜಾದೇವಿಯವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾಗಳು.

ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿನಿಮಾ ಕ್ಷೇತ್ರದಲ್ಲಿನ ಅವರ ಅಮೋಘ ಸಾಧನೆಗಾಗಿ ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.

You cannot copy content of this page

Exit mobile version