Home ರಾಜ್ಯ ಡೆಂಗ್ಯೂ ಭೀತಿ; ಸೋಂಕು ಹರಡಲು ಕಾರಣರಾದವರಿಗೆ ಬಾರಿ ದಂಡ ವಿಧಿಸಲು ಹೈಕೋರ್ಟ್ ಸೂಚನೆ

ಡೆಂಗ್ಯೂ ಭೀತಿ; ಸೋಂಕು ಹರಡಲು ಕಾರಣರಾದವರಿಗೆ ಬಾರಿ ದಂಡ ವಿಧಿಸಲು ಹೈಕೋರ್ಟ್ ಸೂಚನೆ

0

ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಹರಡಲು ಕಾರಣರಾಗುವವರ ಮೇಲೆ ಬಾರಿ ಮೊತ್ತದ ದಂಡ ಹಾಕುವ ಬಗ್ಗೆ ಹೈಕೋರ್ಟ್ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ. ಆ ಮೂಲಕ ಆರೋಗ್ಯ ಇಲಾಖೆ ಡೆಂಗ್ಯೂ ಸೋಂಕಿಗೆ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೇ ದಂಡಕ್ಕೂ ಮುಂದಾಗಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಡೆಂಗ್ಯೂ ಸೋಂಕು ಪೀಡಿತರು ಗುಣಮುಖರಾಗಲು ಕೇವಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದೇ ತಮ್ಮ ಕರ್ತವ್ಯ ಎಂದು ಭಾವಿಸದೇ ಈ ರೋಗ ಹರಡುವುದಕ್ಕೆ ಕಾರಣರಾದ ವ್ಯಕ್ತಿಗಳು, ಸಂಘ ಸಂಸ್ಥೆಗಳು ಹಾಗೂ ವಸತಿ ಸಮುಚ್ಛಯಗಳಿಗೆ ಭಾರಿ ದಂಡ ವಿಧಿಸಬೇಕು. ಈ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಡೆಂಗ್ಯೂ ಪ್ರಕರಣ ಹೆಚ್ಚ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

You cannot copy content of this page

Exit mobile version