Friday, April 26, 2024

ಸತ್ಯ | ನ್ಯಾಯ |ಧರ್ಮ

́ಗೋ ಬ್ಯಾಕ್‌ ಶೋಭಾʼ ಪೋಸ್ಟರ್‌ ಹಚ್ಚಿದ ನಾಲ್ವರು ಯುವಕರ ವಿರುದ್ಧ FIR

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಗರಿಗೆದರಿದಂತೆ ರಾಜಕೀಯ ಚಟುವಟಿಕೆಗಳೂ ಚುರುಕುಗೊಂಡಿವೆ. ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಅಭ್ಯರ್ಥಿ ವಿವಾದ ಈಗ ಇನ್ನೊಂದು ಹಂತ ತಲುಪಿದ್ದು, ಅಲ್ಲಿನ ಸಂಸದೆ ಶೋಭಾ ಕರಂದ್ಲಾಜೆಯವರ ವಿರುದ್ಧ ಪೋಸ್ಟರ್‌ ಅಂಟಿಸಿದ ಆರೋಪದಡಿ ನಾಲ್ವರು ಯುವಕರ ವಿರುದ್ಧ FIR ದಾಖಲಿಸಲಾಗಿದೆ.

ಆಪಾದಿತರು ʼಶೋಭಕ್ಕ ಎಲ್ಲಿದ್ದೀರ?ʼ, ʼಶೋಭಕ್ಕ ಕಾಣೆʼ ಎನ್ನುವ ಪೋಸ್ಟರುಗಳನ್ನು ತರೀಕೆರೆಯಿಂದ ಚಿಕ್ಕಮಗಳೂರು ತನಕವೂ ರಾತ್ರೋರಾತ್ರಿ ಅಂಟಿಸಿದ್ದರು. ಪೋಸ್ಟರ್‌ ಅಂಟಿಸಿದ ನಾಲ್ವರು ಯುವಕರನ್ನು ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಯುವಕರು ತರೀಕೆರೆ ಮೂಲದವರಾಗಿದ್ದು ತರೀಕೆರೆ ಪಟ್ಟಣದಿಂದ ಚಿಕ್ಕಮಗಳೂರು ನಗರದವರೆಗೂ ಪೋಸ್ಟರ್ ಅಂಟಿಸಿದ್ದರು.

ನಗರಸಭೆಯ ಪೌರ ಕಾರ್ಮಿಕರೊಬ್ಬರು ನೀಡಿದ ದೂರನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಯುವಕರೂ ನಮಗೂ ಪೋಸ್ಟರಿಗೂ ಸಂಬಂಧವಿಲ್ಲವೆಂದೂ, ಹಣ ಕೊಟ್ಟು ಪೋಸ್ಟರ್‌ ಅಂಟಿಸುವಂತೆ ಹೇಳಿದ್ದರಿಂದ ನಾವು ಅಂಟಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಬಸವನಹಳ್ಳಿ ಪೊಲೀಸ್‌ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ನಡುವೆ ಗೋ ಬ್ಯಾಕ್‌ ಅಭಿಯಾನದ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, “ಕಳೆದ ಚುನಾವಣೆಯಲ್ಲಿಯೂ ಕೆಲವರು ಗೋ ಬ್ಯಾಕ್ ಅಭಿಯಾನ ಮಾಡಿದ್ರು. ಇಂದೂ ಸಹ ಅದನ್ನೇ ಮಾಡಲು ಹೊರಟಿದ್ದಾರೆ. ಕೆಲವರು ದುಡ್ಡಿನ ಮದದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು