Home ಬ್ರೇಕಿಂಗ್ ಸುದ್ದಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬಿಎನ್‌ಪಿ ಹಿರಿಯ ನಾಯಕಿ ಖಲೀದಾ ಜಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬಿಎನ್‌ಪಿ ಹಿರಿಯ ನಾಯಕಿ ಖಲೀದಾ ಜಿಯಾ ನಿಧನ

0

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಿರಿಯ ನಾಯಕಿ ಖಲೀದಾ ಜಿಯಾ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು ಎಂದು ಬಿಎನ್‌ಪಿ ಮೂಲಗಳು ದೃಢಪಡಿಸಿವೆ.

ವೈದ್ಯರ ಮಾಹಿತಿ ಪ್ರಕಾರ, ಖಲೀದಾ ಜಿಯಾ ಅವರು ಯಕೃತ್ತಿನ ಸಿರೋಸಿಸ್, ಸಂಧಿವಾತ, ಮಧುಮೇಹ ಸೇರಿದಂತೆ ವಯೋಸಹಜ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಜೊತೆಗೆ ಎದೆ ಹಾಗೂ ಹೃದಯ ಸಂಬಂಧಿತ ತೊಂದರೆಗಳೂ ಅವರನ್ನು ಕಾಡುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು.

ಮೂರು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಖಲೀದಾ ಜಿಯಾ ಅವರು, ಹಲವು ದಶಕಗಳ ಕಾಲ ಬಿಎನ್‌ಪಿಯನ್ನು ಮುನ್ನಡೆಸಿದ ಪ್ರಮುಖ ರಾಜಕೀಯ ನಾಯಕಿಯಾಗಿದ್ದರು. ಅವರ ನಿಧನದ ಸುದ್ದಿ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಶೋಕದ ಛಾಯೆ ಮೂಡಿಸಿದೆ.

ಖಲೀದಾ ಜಿಯಾ ಅವರ ನಿಧನವನ್ನು ಯುನೈಟೆಡ್ ನ್ಯೂಸ್ ಬಾಂಗ್ಲಾದೇಶಕ್ಕೆ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಅಧಿಕೃತವಾಗಿ ತಿಳಿಸಿದೆ.

You cannot copy content of this page

Exit mobile version