Home ಅಪರಾಧ ಛತ್ತೀಸ್‌ಗಢ: ಪೊಲೀಸ್ ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಛತ್ತೀಸ್‌ಗಢ: ಪೊಲೀಸ್ ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

0

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಮಾನವೀಯತೆ ಮರೆಸುವ ಘಟನೆಯೊಂದು ನಡೆದಿದ್ದು, 19 ವರ್ಷದ ಯುವತಿಯ ಮೇಲೆ ಐವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಐವರ ಪೈಕಿ ಒಬ್ಬ ಆರೋಪಿ ಪೊಲೀಸರ ತುರ್ತು ಪ್ರತಿಕ್ರಿಯೆ ಸೇವಾ ವಾಹನದ (ಡಯಲ್ 112) ಚಾಲಕನಾಗಿರುವುದು ಇಡೀ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ. ಸದ್ಯ ಪೊಲೀಸರು ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಘಟನೆಯ ವಿವರದ ಪ್ರಕಾರ, ಜನವರಿ 8ರ ರಾತ್ರಿ ಬಂಕಿಮೊಂಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಸಂತ್ರಸ್ತೆಗೆ ಪರಿಚಿತನಾಗಿದ್ದ ಒಬ್ಬ ಆರೋಪಿಯು ಆಕೆಗೆ ಕರೆ ಮಾಡಿ ಜನನಿಬಿಡ ಪ್ರದೇಶದಿಂದ ದೂರವಿರುವ ನಿರ್ಜನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಪೊಲೀಸ್ ವಾಹನದ ಚಾಲಕ ಮತ್ತು ಇತರ ನಾಲ್ವರು ಆರೋಪಿಗಳು ಯುವತಿಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ನಂತರ ಆರೋಪಿಗಳು ಸಂತ್ರಸ್ತೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ನಂತರ ಪ್ರಜ್ಞೆ ಬಂದ ಯುವತಿ ಹೇಗೋ ಮನೆಗೆ ತಲುಪಿ ತನ್ನ ಕುಟುಂಬದವರಿಗೆ ನಡೆದ ಭೀಕರ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣ ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದ ಪೊಲೀಸರು ಆರಂಭದಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ‘ಶೂನ್ಯ ಎಫ್‌ಐಆರ್’ (Zero FIR) ದಾಖಲಿಸಿಕೊಂಡು, ನಂತರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಘಟನೆ ನಡೆದ ವ್ಯಾಪ್ತಿಯ ಬಂಕಿಮೊಂಗ್ರಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

You cannot copy content of this page

Exit mobile version