ಹಾಸನ : ಜಾನಪದ ಎಂಬುದು ಯಾರನ್ನು ನೋಯಿಸುವುದಿಲ್ಲ. ಎಲ್ಲಾರ ಎದೆಯನ್ನು ತಟ್ಟುತ್ತದೆ. ಮುಟ್ಟಿ ಎಲ್ಲಾರಿಗೂ ರೋಮಾಂಚನ ಕೊಡುತ್ತದೆ. ಆದರೇ ನಾಗರೀಕ ಕಲೆಯು ಇದು ಎಲ್ಲಾರನ್ನು ತಟ್ಟುವುದಕ್ಕಿಂತ ಹೆಚ್ಚಾಗಿ ಎಲ್ಲಾರನ್ನು ಹರ್ಟ್ ಮಾಡುತ್ತದೆ. ಆಗೆ ಅದನ್ನೆ ತಮ್ಮ ಕಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.
ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ. ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾನಪದ ಉತ್ಸವ, ಗ್ರಾಮೀಣ ಕಲರವ ಮತ್ತು ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಅವರು ವಿಭಿನ್ನ ರೀತಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಜಾನಪದಕ್ಕೆ ವಿಶ್ವವನ್ನು ಕುಣಿಸುವ ಶಕ್ತಿ ಇದೆ. ಅದು ಈ ಜನಪದದ ಸತ್ವ. ಜಾನಪದದ ತುತ್ತ ತುದಿಯ ಸೊಗಡನ್ನು ಉಂಡು, ಇವತ್ತು ನಾಗರೀಕತೆಯ ತುತ್ತ ತುದಿಯಲ್ಲಿ ನಿಂತು ಎಲ್ಲಾವನ್ನು ಮರೆಯುತ್ತಿರುವ ಹಾಗೂ ಬರಡು ಆಗಿರುವ ಬಾರೆಯನ್ನು ಕೂಡ ನೋಡುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು. ನಮ್ಮ ತಲೆ ಮಾರಿಗೆ ಮರೆತು ಹೋಗಿರುವುದಿಲ್ಲ. ಆದರೇ ನಿಮ್ಮ ತಲೆ ಮಾರಿಗೆ ನೊಡುವ ಸೌಭಾಗ್ಯ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ ಎನ್ನುವ ನೋವು ನನ್ನಲ್ಲಿದೆ. ನಮ್ಮ ತಲೆ ಮಾರಿನ ಜನ ಓದುವುದೇ ಸಂಭ್ರಮ ಎಂದುಕೊಂಡು ಅದನ್ನೆಲ್ಲಾ ಮೂಲೆ ಸೇರಿಸಿ ಬಿಟ್ಟೆವು. ನಮ್ಮಪ್ಪ, ನಮ್ಮಜ್ಜ ಏನು ಮೂಟೆ ಕಟ್ಟಿ ಬಿಟ್ಟಿ ಹೋಗಿದ್ದರೂ ಅದನ್ನು ಹೊತ್ತುಕೊಂಡು ಬಂದು ನಿಮ್ಮ ಎದುರಿಗೆ ಇಡುವ ಶಕ್ತಿ ನಮಗೆ ಇರಲಿಲ್ಲ. ಅದ್ನನ ಮಾಡಬೇಕಿತ್ತು. ಆದರೇ ಮಾಡಲಿಲ್ಲ. ಒಂದು ಕಾಲಮಾನದಲ್ಲಿ ಇರುವುದು ಅದೆಲ್ಲಾ ಬಿಟ್ಟು ನಾಗರೀಕತೆಯತ್ತ ಹೊರಡದೆ ಒಂದು ದೊಡ್ಡ ಪರಿವರ್ತನೆ ಎಂದು ಹೇಳಿ ಒಂದು ದೊಡ್ಡ ಭ್ರಮೆಯಲ್ಲಿ ನಾವುಗಳು ಇದ್ದೇವು. ಪರಿವರ್ತನೆಯ ತುತ್ತ ತುದಿಯತ್ತ ಬಂದಾಗ ಗೊತ್ತಾಗಿ ಇದರಲ್ಲಿ ಅರ್ಥ, ಶಕ್ತಿ ಹಾಗೂ ಸತ್ವ ಇಲ್ಲ ಎಂಬುದು ತಿಳಿಯಿತು. ಈ ಸ್ವಾಧ, ಶಕ್ತಿ ಎಲ್ಲಾ ಪೂರ್ವಿಕರು ಆಚರಿಸಿಕೊಂಡು ಬಂದ ಅದರಲ್ಲಿ ಇತ್ತು ಎಂದರು.
ಕಲೆಯನ್ನು ಮೂರು ಭಾಗವಾಗಿ ವಿಂಗಡಿಸುತ್ತಿದ್ದು, ಒಂದು ನಮ್ಮ ಪರಂಪರೆಯ ಜನಪದ ಕಲೆ, ಎರಡನೆಯದು ಪರಂಪರೆಯ ಶಾಶ್ತ್ರೀಯ ಕಲೆ, ಕೊನೆಯದು ಶುದ್ಧ ಆಧುನಿಕ ಕಲೆ. ಜಾನಪದ ಮತ್ತು ಶಾಸ್ತಿçÃಯ ಒಟ್ಟೊಟ್ಟಿಗೆ ಬಂದಿದ್ದು, ಇವರೆಡರ ತುತ್ತ ತುದಿಯಲ್ಲಿ ನಾಗರೀಕ ಕಲೆ ಬಂದು ಬಿಟ್ಟಿದ್ದು, ಜನಪದ ಎಂಬುದು ಯಾರನ್ನು ನೋಯಿಸುವುದಿಲ್ಲ. ಎಲ್ಲಾರ ಎದೆಯನ್ನು ತಟ್ಟುತ್ತದೆ ಮುಟ್ಟಿ ಎಲ್ಲಾರಿಗೂ ರೋಮಾಂಚನ ಕೊಡುತ್ತದೆ. ಶಾಶ್ತ್ರೀಯಕ್ಕೆ ಎಲ್ಲಾರನ್ನು ತಟ್ಟುವ ಶಕ್ತಿಯಿಲ್ಲ. ಆಸಕ್ತಿ ಇರುವವರನ್ನು ಮಾತ್ರ ಮುಟ್ಟುತ್ತದೆ. ಅದು ಕೂಡ ಯಾರನು ನೋಯಿಸದೇ, ತಟ್ಟುತ್ತದೆ. ಆದರೇ ನಾಗರೀಕ ಕಲೆಯು ಇದು ಎಲ್ಲಾರನ್ನು ತಟ್ಟುವುದಕ್ಕಿಂತ ಹೆಚ್ಚಾಗಿ ಎಲ್ಲಾರನ್ನು ಹರ್ಟ್ ಮಾಡುತ್ತದೆ.. ಹರ್ಟ್ ಮಾಡುವುದನ್ನೆ ಕಲೆ ಅಂದು ಕೊಂಡಿದ್ದಾರೆ. ಇಂತಹ ನಡುವೆ ಜಾನಪದ ಕಲೆ ಅಲ್ಲಲ್ಲಿ ಉಳಿದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾನಪದ ಹಾಗೂ ಗ್ರಾಮೀಣ ಸೊಗಡನ್ನು ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದರು. ಹಿಂದಿನ ದಿನಗಳಲ್ಲಿ ನಡೆಯುತ್ತಿದ್ದ ಮದುವೆಯನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಜೊತೆಗೆ ಗ್ರಾಮೀಣ ಕ್ರೀಡಾಕೂಟ ಎಲ್ಲಾವು ನೋಡುಗರ ಗಮನಸೆಳೆಯಿತು. ಇದೆ ವೇಳೆ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು.
ಇದೆ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ಕಲಾವಿದ ಬಿ.ಟಿ. ಮಾನವ, ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಕೆ.ಜಿ. ಕವಿತ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಬಿ.ಎನ್. ಮಹಂತೇಶ್, ಸರ್.ಎಂ. ವಿಶ್ವೇಶ್ವರಯ್ಯ ಸಂಘದ ಅಧ್ಯಕ್ಷ ಎಂ. ಸುನಿಲ್ ಕುಮಾರ್, ಸಿಟಿ ಕೋ ಆಪರೇಟಿವ್ ನಿರ್ದೇಶಕ ಬಾಲಸುಬ್ರಮಣ್ಯ, ನಗರಸಭೆ ಮಾಜಿ ಸದಸ್ಯ ಚಂಧ್ರಶೇಖರ್, ಸಮಾಜ ಸೇವಕ ಹೆಚ್.ಆರ್. ಪ್ರದೀಪ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಸಚಿನ್, ವಾರ್ಷಿಕ ಸಂಚಿಕೆ ಸಂಚಾಲಕ ಬಿ.ಹೆಚ್. ರಾಮೇಗೌಡ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಹೆಚ್.ಎನ್. ಹರೀಶ್, ಉಪನ್ಯಾಸಕ ಮಹೇಶ್, ಇಂಗ್ಲೀಷ್ ಭಾಷೆ ಉಪನ್ಯಾಸಕ ಎಸ್. ಯೋಗೇಶ್, ಹರ್ಷಾ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಹರೀಶ್ ಸ್ವಾಗತಿಸಿದರು.