
ಸಕಲೇಶಪುರ: ಯಸಳೂರು ಹೋಬಳಿಯ ವಣಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವ್ಯಾಪ್ತಿಯ ತಂಬಲಗೇರಿ ಗ್ರಾಮದಲ್ಲಿ ಆತಂಕ ಉಂಟು ಮಾಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಶನಿವಾರ ಮುಂಜಾನೆಯಿಂದ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಗ್ರಾಮಸ್ಥರು, ಕಾಫಿ ತೋಟಕ್ಕೆ ಹೋಗುವ ಕೂಲಿ ಕಾರ್ಮಿಕರಿಗೆ ಆತಂಕ ಉಂಟಾಗಿತ್ತು.
ಉರಗ ತಜ್ಞ ಹರೀಶ್ ಸಹಾಯದಿಂದ ಕಾಳಿಂಗ ಸರ್ಪವನ್ನು ಹಿಡಿಯಲಾಯಿತು.
ಪದೇ ಪದೇ ಮಲೆನಾಡು ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳು ಭಯ ಉಂಟು ಮಾಡಿದ್ದು, ಈ ಹಾವುಗಳು ಎಲ್ಲಿಂದ ಬರುತ್ತಿವೆ? ಯಾರು ತಂದು ಬಿಡುತ್ತಿದ್ದಾರೆ.ಎಂಬುದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.