ಹಾಸನ: ಶುಕ್ರವಾರದಿಂದ ಆರಂಭವಾದ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರ ಅಪಾರ ದರ್ಶನದಿಂದ ಕೇವಲ ಎರಡೇ ದಿನಗಳಲ್ಲಿ 2.24 ಕೋಟಿರೂ. ಆದಾಯ ದಾಖಲಿಸಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹300 ವಿಶೇಷ ದರ್ಶನದಲ್ಲಿ ಒಟ್ಟು 27,759 ಟಿಕೆಟ್‌ಗಳು ಮಾರಾಟವಾಗಿವೆ. ಅದೇ ರೀತಿ ₹1000 ವಿಶೇಷ ದರ್ಶನದಲ್ಲಿ ಒಟ್ಟು 12,396 ಮಾರಾಟವಾಗಿವೆ.
ಇದೇ ವೇಳೆ ಲಾಡು ಪ್ರಸಾದ ಮಾರಾಟದ ಸಂಖ್ಯೆ 17,337 ಆಗಿದ್ದು, ಮೂರು ದಿನಗಳಲ್ಲಿ ಭಾರಿ ಆದಾಯ ಲಭಿಸಿದೆ
300ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ ಒಟ್ಟು 83,27,700 ರೂ ಹಾಗೂ 1000 ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ 1,23,96,000 ರೂ. ಲಾಡು ಪ್ರಸಾದ ಮಾರಾಟದಿಂದ 17,33,700 ರೂ. ಸೇರಿ ಒಟ್ಟು ಆದಾಯ: ₹2 ಕೋಟಿ 24 ಲಕ್ಷ 57 ಸಾವಿರ 400 ರೂ. ಸಂಗ್ರಹವಾಗಿದೆ.