Home ನಿಧನ ಸುದ್ದಿ  ತಾಯಿಯಿಂದ ಬೇರ್ಪಟ್ಟ ಹಿನ್ನೆಲೆ ನಾಲ್ಕು ಹುಲಿ ಮರಿಗಳ ದಾರುಣ ಸಾ*ವು

 ತಾಯಿಯಿಂದ ಬೇರ್ಪಟ್ಟ ಹಿನ್ನೆಲೆ ನಾಲ್ಕು ಹುಲಿ ಮರಿಗಳ ದಾರುಣ ಸಾ*ವು

0

ಮೈಸೂರು : ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ತಾಯಿಯೊಂದಿಗೆ ಸೆರೆಯಾದ ನಾಲ್ಕು ಹುಲಿ ಮರಿಗಳು (Tiger Died) ಆಹಾರ ಸ್ವೀಕರಿಸದೆ ಅಸ್ವಸ್ಥಗೊಂಡಿದ್ದವು, ಆದರೆ ಇದೀಗ  ಆ ಮರಿಗಳು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ನವೆಂಬರ್‌ 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿಯೂ ಗ್ರಾಮದಲ್ಲಿ ಓಡಾಡುತ್ತಿರುವುದು ಕಂಡು ಬಂದಿತ್ತು. ಬಳಿಕ ನವೆಂಬರ್‌ 29 ಮತ್ತು 30ರಂದು ಗೌಡನಕಟ್ಟೆ ಗ್ರಾಮದ ಪ್ರಕಾಶ್ ಅವರ ಜೋಳದ ಹೊಲದ ಬಳಿ ಮತ್ತೆ ಕಾಣಿಸಿಕೊಂಡಿದ್ದ ಮರಿಗಳನ್ನು ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಪತ್ತೆಹಚ್ಚಿದರು.

ನಂತರ ಮಧ್ಯರಾತ್ರಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಇತ್ತ ತಾಯಿಯಿಂದ ಬೇರ್ಪಟ್ಟ ಮರಿಗಳು ಎರಡು ದಿನಗಳ ಕಾಲ ಆಹಾರವಿಲ್ಲದೆ, ಜನರ ಕೂಗಾಟ, ಓಡಾಟದಿಂದ ಗಾಬರಿಗೊಂಡು ನಿತ್ರಾಣಗೊಂಡಿದ್ದವು. ಕೂಡಲೇ ಅವುಗಳನ್ನು  ಕೂಡ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಬರಿಯಿಂದ ಮತ್ತು ಆಹಾರ ಸೇವಿಸದೆ ಅಸ್ವಸ್ಥಗೊಂಡ ಕಾರಣ ಕಳೆದ ನಾಲ್ಕು ದಿನಗಳ ಒಳಗೆ ಒಂದಾದ ಮೇಲೆ ಒಂದು ಮರಿಗಳು ಪ್ರಾಣ ಕಳೆದುಕೊಂಡಿವೆ ಎಂದು ತಿಳಿದು ಬಂದಿದೆ. ಸದ್ಯ ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮರಿಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಾಯಿ ಹುಲಿ ಮಾತ್ರ ಸಧ್ಯಕ್ಕೆ ಆರೋಗ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನೇರಳೆ ಗ್ರಾಮದಲ್ಲಿರುವ ಶಿವಕುಮಾರ್ ಅವರ ಜಮೀನಿನಲ್ಲಿ ಬೆಳಗ್ಗೆ ಕಬ್ಬು ಕಟಾವು ಕಾರ್ಯ ನಡೆಯುತ್ತಿದ್ದ ವೇಳೆ ಪೊದೆಯನ್ನು ತೆರೆಯುವಾಗ ಅಲ್ಲಿ ಮಲಗಿದ್ದ ಎರಡು ಚಿರತೆ ಮರಿಗಳು ಕಣ್ಣಿಗೆ ಬಿದ್ದಿವೆ. ತಕ್ಷಣವೇ ಕೆಲಸ ನಿಲ್ಲಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮರಿಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ. ಕೇವಲ ಕೆಲವು ವಾರಗಳ ವಯಸ್ಸು ಇರುವಂತಿರುವ ಈ ಮರಿಗಳು ಆರೋಗ್ಯಕರವಾಗಿದ್ದು, ಈಗ ಇಲಾಖೆಯ ರಕ್ಷಣಾ ಮಾಡುತ್ತಿದ್ದಾರೆ. ತಾಯಿ ಚಿರತೆ ಸಮೀಪದಲ್ಲಿರುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಭಾಗದಲ್ಲಿ ಅನೇಕ ದಿನಗಳಿಂದ ಚಿರತೆ ಓಡಾಟ ಕಂಡುಬಂದಿತ್ತು. ಇದೀಗ ಮರಿ ಸಿಕ್ಕಿದ್ದು, ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

You cannot copy content of this page

Exit mobile version