ಬೆಂಗಳೂರು : ಕಳೆದ ಒಂದು ವಾರದಿಂದ ಇಂಡಿಗೋ (Indigo) ವಿಮಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಇದೀಗ ಇಂಡಿಗೋ ಫ್ಲೈಟ್ ಕ್ಯಾನ್ಸಲ್ ಹಿನ್ನೆಲೆ ಬಿಎಂಟಿಸಿಗೆ (BMTC) ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕಳೆದ ಒಂದು ವಾರದಿಂದ ಇಂಡಿಗೋ ವಿಮಾನದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆ ಏರ್ಪೋರ್ಟ್ ಗೆ ಖಾಲಿ ಖಾಲಿಯಾಗಿ ವೋಲ್ವೋ ಬಸ್ಸುಗಳು ಸಂಚಾರ ಮಾಡುತ್ತಿದೆ.
ಈ ಹಿಂದಿಗಿಂತ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದರಿಂದಾಗಿ ಬಿಎಂಟಿಸಿ ನಿಗಮಕ್ಕೆ ಅರ್ದ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಒಂದು ಬಸ್ ನಲ್ಲಿ ಪ್ರಯಾಣಿಕರಿದ್ದರು, ಮತ್ತೊಂದು ಬಸ್ ಖಾಲಿ ಸಂಚಾರವಾಗುತ್ತಿದೆ.
ಪ್ರತಿದಿನ ನಗರದ ವಿವಿಧ ಕಡೆಯಿಂದ ಏರ್ಪೋರ್ಟ್ ಗೆ 156 ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈ ಬಸ್ಸುಗಳಿಂದ ಅಂದಾಜು 1000 ಟ್ರಿಪ್ ಗಳನ್ನು ಮಾಡಲಾಗುತ್ತೆ.
ಆದರೆ ಇಂಡಿಗೋ ಫ್ಲೈಟ್ ಸಮಸ್ಯೆಯಿಂದ ಪ್ರತಿದಿನದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಉಂಟಾಗಿದ್ದು, ಪ್ರತಿದಿನ ಸುಮಾರು 2 ಸಾವಿರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
