ಹಾಸನ: ಅದಿ ದೇವತೆ ಹಾಸನಾಂಬೆ ದೇವಿ ದರ್ಶನದ ಐದನೇ ದಿನದಂದು ಸೋಮವಾರದಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಆಗಮಿಸಿ ದೇವಿ ದರ್ಶನ ಪಡೆದು ಪುನಿತರಾದರು. ನಂತರ ಹಾಸನ ನಗರಪಾಲಿಕೆ ಆಗಿದೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಎಲ್ಲಾರ ಮೊಗದಲ್ಲಿ ಸಂತೋಷ ತಂದ ಪ್ರಸಂಗ ನಡೆಯಿತು.
ಮೊದಲು ಹಾಸನಾಂಬೆ ದರ್ಶನ ಮಾಡಿ ಅಲ್ಲೆ ಇರುವ ದರ್ಭಾರ್ ಗಣಪತಿ ದೇವಸ್ಥಾನ್ಕಕೆ ತೆರಳಿದರು. ನಂತರ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನದೊಂದಿಗೆ ಗೌರವ ಸ್ವೀಕರಿಸಿದರು. ಇದೆ ವೇಳೆ ಉಪವಿಭಾಗಧಿಕಾರಿ ಮಾರುತಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶಿಸಿ ಮಾತನಾಡಿ, ಹಾಸನಾಂಬೆ ದೇವಿ ದರ್ಶನ ಮಾಡಿ ಗಣಪತಿಯ ದರ್ಶನ ಪಡೆದಿದ್ದೇನೆ. ಎಲ್ಲಾ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದಂತೆ ೨೦೨೪-೨೮ನೇ ವರ್ಷದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರು ಸುಭೀಕ್ಷೆಯಿಂದ ಇರಲಿ. ಎಂದುಕೊಂಡಂತೆ ನೆರವೇರಿದೆ. ಎಲ್ಲಾ ಜಲಾಶಯಗಳು ಕೂಡ ತುಂಬಿದೆ. ಎಲ್ಲಾ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜನರಲ್ಲಿರುವ ಅಸಮಾನತೆ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ನೂರು ಕೋಟಿ ಜನರಿಗೆ ಒಳ್ಳೆಯದಾದರೇ ನಮಗೂ ಒಳ್ಳೆಯದಾಗುತ್ತದೆ. ನಾವೆಲ್ಲಾ ಮಾನ ಸಮಾಜದಲ್ಲಿ ಇರುವವರು. ನಾವುಗಳೆಲ್ಲಾ ಪರಸ್ಪರ ಪ್ರೀತಿಸಬೇಕೆ ಹೊರತು ಯಾವ ಕಾರಣಕ್ಕೂ ಪರಸ್ಪರ ಧ್ವೇಶಿಸ ಬಾರದು. ಧ್ವೇಷವನ್ನು ಹತ್ತಿಕ್ಕೂವ ಕೆಲಸ ಮಾಡಬೇಕು. ಯಾರೆ ಪಟ್ಟಭದ್ರ ಹಿತಾಸಕ್ತಿಗಳು ಧ್ವೇಷವನ್ನು ಬೆಳೆಸುವ ಕೆಲಸ ಮಾಡಿದರೇ ಅವರಿಗೆ ತಕ್ಕ ಶಾಸ್ತಿ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಹೇಳಿದರು.
ಹಾಸನ ನಗರಸಭೆ ಆಗಿರುವುದನ್ನು ಮೇಲ್ ದರ್ಜೆಗೆ ಏರಿಸಿ ನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ನನಗೆ ಹೇಳಿದ್ದರು. ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚಿತವಾಗಿ ಕ್ಯಾಬಿನೆಟ್ ಇತ್ತು. ಸಭೆಯಲ್ಲಿ ಪ್ರಸ್ತಾಪ ತಂದು ನಗರಪಾಲಿಕೆಯನ್ನಾಗಿ ಹಾಸನವನ್ನು ಮಾಡಲು ತೀರ್ಮಾನಕೈಗೊಳ್ಳಲಾಗಿದೆ. ಈಗ ಹಾಸನ ನಗರ ಪಾಲಿಕೆ ಆಗಿದೆ ಎಂದು ಹಾಸನಾಂಬೆ ದೇವಸ್ಥಾನದಲ್ಲಿ ಸಿಹಿ ಸುದ್ಧಿ ಹೇಳುವ ಮೂಲಕ ನೆರೆದಿದ್ದವರಲ್ಲಿ ಸಂತೋಷ ತಂದರು. ಹಾಸನಾಂಬೆ ದೇವಿ ದರ್ಶನದ ನಂತರ ಮುಖ್ಯಮಂತ್ರಿಗಳು ಇಲ್ಲಿನ ಭಕ್ತರ ಸಂಖ್ಯೆ ನೋಡಿ, ಹಾಗೂ ಅಚ್ಚುಕಟ್ಟಾಗಿ ದೇವಾಲಯ ಇಟ್ಟಿರುವ ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.
ಇದೆ ವೇಳೆ ಸಚಿವರಾದ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್ ಇತರರು ಉಪಸ್ಥಿತರಿದ್ದರು.