Home ದೇಶ ರೈಲ್ವೆ ಇಲಾಖೆಯನ್ನು ಇಡೀ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ತರಲು ತೀರ್ಮಾನ : ಕೇಂದ್ರ ಸಚಿವ ವಿ...

ರೈಲ್ವೆ ಇಲಾಖೆಯನ್ನು ಇಡೀ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ತರಲು ತೀರ್ಮಾನ : ಕೇಂದ್ರ ಸಚಿವ ವಿ ಸೋಮಣ್ಣ

0

ಹಾಸನ: ಭಾರತ ಭವಿಷ್ಯದ ದೇಶದ ರೈಲ್ವೆ ಇಲಾಖೆ ಇಡೀ ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಮಾಡಲಾಗಿದೆ. ನವೆಂಬರ್ ೧ ಮತ್ತು ೨ ರಂದು ಪ್ರಧಾನಮಂತ್ರಿಗಳು ಪ್ರಗತಿ ಪರಿಶೀಲನೆ ಮಾಡಿದ ನಂತರ ಉದ್ದೇಶಿಸಿ ಮಾತನಾಡುವರು. ಈ ವೇಳೆ ಒಂದು ಲಕ್ಷ ಉದ್ಯೋಗಿಗಳಿಗೆ ಅರ್ಹತಾ ಪತ್ರ ಕೊಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ಹಾಸನಾಂಬೆ ದೇವಿ ದರ್ಶನ ಪಡೆದು ದೇವಾಲಯದಲ್ಲಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮಂಗಳೂರಿಗೆ ಹೆಚ್ಚುವರಿ ರೈಲು ಜೊತೆಗೆ ಚಿಕ್ಕಮಗಳೂರು-ಬೇಲೂರು-ಆಲೂರಿಗೆ ೫೮೫ ಎಕರೆ ಜಾಗವನ್ನು ಜಿಲ್ಲಾಧಿಕಾರಿ ೧೧ ನೋಟಿಫಿಕೇಷನ್ ಮಾಡಿದ್ದು, ತಕ್ಷಣದಲ್ಲೇ ನಮಗೆ ಹಸ್ತಾಂತರ ಮಾಡುತ್ತಾರೆ. ಮೂರು ವರ್ಷದಲ್ಲಿ ಆ ಯೋಜನೆ ಮುಗಿಯತ್ತದೆ. ನಾನು ಬಂದ ಮೇಲೆ ಕರ್ನಾಟಕ ರಾಜ್ಯದಲ್ಲಿ ಹನ್ನೊಂದು ಯೋಜನೆಗಳು ೧೮೦೦ ಹೊಸ ಲೈನ್‌ಗಳನ್ನು ಹಾಕಲು ಚಾಲನೆ ಕೊಟ್ಟಿದ್ದೇವೆ. ಈಗಾಗಲೇ ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಹತ್ತು ಹಲವಾರು ಕಡೆ ಕೆಲಸ ನಡೆಯುತ್ತಿದೆ. ೪೩ ಸಾವಿರ ಕೋಟಿ ರೂಪಾಯಿಗಳ, ನೆನಗುದಿಗೆ ಬಿದ್ದಿರುವ ಕೆಲಸ ಕೈಗೆತ್ತುಕೊಂಡಿದ್ದೇವೆ. ಆರ್.ಓ.ಬಿ.ದು ತೊಂದರೆ ಆಗಿದೆ ಎಂದರು.

ರಾಷ್ಟ್ರದ ಪ್ರಧಾನ ಮಂತ್ರಿ ನಮ್ಮ ನೆಚ್ಚಿನ ನರೇಂದ್ರ ಮೋದಿಯವರು ದೇಶದ ಇತಿಹಾಸಲ್ಲಿ ಭಾರತೀಯರಿಗೆ ಭವಿಷ್ಯ ಇದೆ ಅನ್ನೋದನ್ನ ಹತ್ತು ವರ್ಷಗಳಲ್ಲಿ ತೋರಿಸಿಕೊಟ್ಟಿದ್ದಾರೆ. ೪೪ ಸಾವಿರ ಡಬ್ಲಿಂಗ್ ಲೈನ್‌ನ್ನು ಮಾಡಿ, ೯೮ ಪರ್ಸೆಂಟ್ ಎಲೆಕ್ಟ್ರಿಕೇಷನ್ ಮಾಡಿ ಹೊಸಲೈನ್‌ಗಳನ್ನ ತ್ವರಿತಗತಿಯಲ್ಲಿ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. ೧೦೪ ವಂದೇ ಭಾರತ್ ರೈಲುಗಳು ಇಡೀ ದೇಶದ ೨೪ ರಾಜ್ಯಗಳಲ್ಲಿ ೨೯೪ ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ೧೦ ರೈಲುಗಳು ಓಡಾಡುತ್ತಿದೆ. ಹೊಸದಾಗಿ ೩೦ ಸಾವಿರ ಹೊಸ ಬೋಗಿಗಳನ್ನು ಒಂದೊಂದು ಪ್ಯಾಸೆಂಜರ್ ರೈಲುಗಳಿಗೆ ಮೂರು, ನಾಲ್ಕು ಬೋಗಿಗಳನ್ನು ಅಳವಡಿಸಲಾಗುತ್ತಿದೆ.

ತುಮಕೂರಿನಿಂದ ಬೆಂಗಳೂರಿಗೆ ಮೆಮೊ ಟ್ರೈನ್ ಹೊಸದಾಗಿ ಮಾಡಿದ್ದೇವೆ. ಅದೇ ರೈಲು ಹಾಸನದಿಂದ ಬೆಂಗಳೂರು ಓಡಾಡಲು ನಮ್ಮ ದರದಲ್ಲಿ ೬೦ ಪರ್ಸೆಂಟ್ ನಲ್ಲಿ ಓಡಾಡಲು ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ. ದೇಶದ ಪ್ರಧಾನ ಮಂತ್ರಿಗಳಿಗೆ, ರಾಷ್ಟ್ರದ ರೈಲ್ವೆ ಸಚಿವರಿಗೆ, ನನಗೂ ಕೂಡ ಆಶೀರ್ವಾದ ಮಾಡಿದ್ದು, ಭಾರತ ದೇಶ ಭವಿಷ್ಯದ ಭಾರತದಲ್ಲಿ ರೈಲ್ವೆ ಇಲಾಖೆ ಇಡೀ ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಮಾಡಲಾಗಿದೆ. ನವೆಂಬರ್ ೧ ಮತ್ತು ೨ ರಂದು ಪ್ರಧಾನಮಂತ್ರಿಗಳು ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಅಕ್ಟೋಬರ್ ೨೯ ರಂದು ಒಂದು ಲಕ್ಷ ಉದ್ಯೋಗಿಗಳಿಗೆ ಅರ್ಹತಾ ಪತ್ರ ಕೊಡಲಿದ್ದೇವೆ. ಒಂದು ನಾನು, ಕುಮಾರಸ್ವಾಮಿ, ಜೋಶಿ, ಬೇರೆ ಮಂತ್ರಿಯನ್ನು ತೊಡಗಿಸಿಕೊಂಡಿದ್ದಾರೆ.

ಕೇಂದ್ರ ರಾಜ್ಯದ ಸರ್ಕಾರಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ಅವರ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಪತ್ರಕರ್ತರಿಗೆ, ಹಿರಿಯ ನಾಗರೀಕರಿಗೆ ಪಾಸ್ ನಿಂತಿದ್ದು, ಅವರಿಗೆ ಅವಕಾಶ ಕೊಡಲು ನನ್ನದು ಒತ್ತಾಯವಿದೆ. ಪ್ರಧಾನಮಂತ್ರಿ ಅವರು ಆ ಕೆಲಸ ಮಾಡುತ್ತಾರೆ. ಭಾರತ ಸರ್ಕಾರ ಯಾವುದೇ ರಾಜ್ಯದ ಸರ್ಕಾರದ ಜೊತೆ ಸಂಘರ್ಷ ಮಾಡಲ್ಲ. ಅಭಿವೃದ್ಧಿ ಮಾಡಲ್ಲ. ಬಿಜೆಪಿ ಗೆಲ್ಲುತ್ತದೆ. ಮೂರು ಕ್ಷೇತ್ರಗಳಲ್ಲೂ ನಾವೇ ಗೆಲ್ತಿವಿ. ನಾನು ನವೆಂಬರ್ ೨ ರಿಂದ ಪ್ರಚಾರಕ್ಕೆ ಹೋಗುತ್ತೇನೆ. ನಾವೇ ಗೆಲ್ತೀವಿ, ನಾವೇ ಗೆಲ್ತೀವಿ, ನಾವೇ ಗೆಲ್ತಿವಿ ಎಂದು ಹೊರಡುವ ವೇಳೆ ಕೇಂದ್ರ ಸಚಿವರು ಪಟಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಸಿಮೆಂಟ್ ಮಂಜು, ಹುಲ್ಲಳ್ಳಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಮುಖಂಡರಾದ ಶೋಭನ್ ಬಾಬು, ಹೆಚ್.ಎನ್. ನಾಗೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಎಸ್ಪಿ ಮಹಮ್ಮದ್ ಸುಜೀತಾ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version